ಔಷಧಿ ಸೇವನೆಯಷ್ಟೇ ಫಾರ್ಮಸಿಸ್ಟ್‍ರ ಕರ್ತವ್ಯ ಅವಶ್ಯ : ಡಿಎಚ್‍ಓ
ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಆರೋಗ್ಯವನ್ನು ಯೋಚಿಸಿದಷ್ಟೇ ಫಾರ್ಮಸಿಸ್ಟರ ಬಗ್ಗೆಯು ಯೋಚಿಸಿ ಎಂಬ ಧ್ಯೆಯ ವಾಕ್ಯದೊಂದಿಗೆ ಜಾಗತಿಕವಾಗಿ ಔಷಧಿಯ ಮಾಹಿತಿ, ಸರಿಯಾದ ಸೇವನೆ, ಬಳಕೆಯ ಅವಶ್ಯಕತೆ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಬಗ್ಗೆ ನಾವೆಲ್ಲರೂ ಜಾಗೃತಿ ನೀಡಬೇಕಿದೆ ಎಂದು
Pharmacists' duty is as essential as administering medicine: DHO


Pharmacists' duty is as essential as administering medicine: DHO


ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಆರೋಗ್ಯವನ್ನು ಯೋಚಿಸಿದಷ್ಟೇ ಫಾರ್ಮಸಿಸ್ಟರ ಬಗ್ಗೆಯು ಯೋಚಿಸಿ ಎಂಬ ಧ್ಯೆಯ ವಾಕ್ಯದೊಂದಿಗೆ ಜಾಗತಿಕವಾಗಿ ಔಷಧಿಯ ಮಾಹಿತಿ, ಸರಿಯಾದ ಸೇವನೆ, ಬಳಕೆಯ ಅವಶ್ಯಕತೆ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಬಗ್ಗೆ ನಾವೆಲ್ಲರೂ ಜಾಗೃತಿ ನೀಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಹಾಯಕ ಔಷದಿ ನಿಯಂತ್ರಕರ ಕಚೇರಿ ಸಹಯೋಗದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೆ.30ರಂದು ನಡೆದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈದ್ಯರು ಚಿಕಿತ್ಸೆ ನೀಡಿದರೆ, ಔಷಧಿ ಚೀಟಿಯನ್ವಯ ಔಷಧಿ ವಿತರಿಸುವ ಮತ್ತು ಇತ್ತೀಚಿನ ಇ-ಔಷಧಿ ತಂತ್ರಾಂಶದಲ್ಲಿ ಆಯಾ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚು ಬಳಕೆಯ ಔಷಧಿಗಳ ಮಾಹಿತಿ ನೀಡುವ, ಎಕ್ಸ್‍ಪೆರಿ ದಿನಾಂಕ ಪರಿಶೀಲಿಸುವ, ತುರ್ತು ಔಷಧಿಗಳ ದಾಸ್ತಾನು ಇಟ್ಟುಕೊಳ್ಳುವ ಫಾರ್ಮಸಿಸ್ಟ್ ಜವಾಬ್ದಾರಿ ಮಹತ್ವದ್ದಾಗಿದೆ. ಖಾಸಗಿ ಔಷಧಿ ವ್ಯಾಪಾರಸ್ಥರು ತಮ್ಮ ಬಳಿ ಯಾವುದೇ ವೈದ್ಯರ ಚೀಟಿಯಿಲ್ಲದೆ ಬರುವ ಜನತೆಗೆ ಔಷಧಿಗಳ ಅಡ್ಡ ಪರಿಣಾಮ ಹಾಗೂ ವೈದ್ಯಕೀಯ ಪದವಿ ಪಡೆಯದೆ ವೈದ್ಯ ವೃತ್ತಿ ಮಾಡುವ ನಕಲಿ ವೈದ್ಯರಿಗೆ ಔಷಧಿಗಳ ಮಾರಾಟ ಮಾಡದಂತೆ ಕೈಜೋಡಿಸಲು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ ಮಹಮ್ಮದ್ ಶಾಕೀರ್ ಮಾತನಾಡಿ, ಭಾರತ ಸರಕಾರವು ಕ್ಷಯಮುಕ್ತ ಭಾರತ ಗುರಿ ಇಟ್ಟುಕೊಂಡಿದ್ದು, ತಮ್ಮಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ ಯಾವುದೇ ಔಷಧಿಗಳ ಮಾರಾಟ ಮಾಡಿದಾಗ ಅದರ ವಿವರನ್ನು ಇಲಾಖೆಗೆ ಒದಗಿಸಿ ರೋಗ ನಿರ್ಮೂಲನೆಗೆ ಸಹಕರಿಸಲು ವಿನಂತಿಸಿದರು.

ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಉದಯ ಕಿಶೋರ್ ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಜೀವದ ಹಂಗು ತೊರದು ಸೋಂಕಿತರಿಗೆ ಕೋವಿಡ್ ಔಷಧಿ, ಸಂರಕ್ಷಣಾ ಪರಿಕರಗಳನ್ನು ಒದಗಿಸಿದ್ದು, ಪ್ರಸ್ತುತ ಭಾರತವು ಜಾಗತಿಕವಾಗಿ ಔಷಧಿ ಉತ್ಪಾದನೆಯಲ್ಲಿ ಮೂರನೇಯ ಸ್ಥಾನದಲ್ಲಿದ್ದು ಇಂದು ಫಾರ್ಮಸಿಸ್ಟ್‍ರ ಹಾಗೂ ಔಷಧಿ ಮಾರಾಟಗಾರರ ಮಹತ್ವ ಹೆಚ್ಚಿದೆ ಎಂದ ಅವರು, ಯುವಜನತೆಗೆ ಮಾದಕತೆಯುಂಟು ಮಾಡಬಹುದಾದ ಯಾವುದೇ ಔಷಧಿಗಳ ವಿತರಣೆ, ಮಾರಾಟ ಮಾಡದಂತೆ ಮನವಿ ಮಾಡಿದರು.

ಸನ್ಮಾನ: ರಾಜ್ಯಮಟ್ಟದಿಂದ ಆಯ್ಕೆ ಮಾಡಲಾದ ಸಿದ್ದಪ್ಪ, ಸೇರಿದಂತೆ ಇತರರಿಗೆ ಇದೆ ವೇಲೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ ನಂದಿತಾ ಅವರು ಮಾತನಾಡಿದರು. ಜಿಲ್ಲಾ ಎನ್‍ವಿಬಿಡಿಸಿಪಿ ಅಧಿಕಾರಿ ಹಾಗೂ ಔಷಧಿ ಉಗ್ರಾಣ ನೋಡಲ್ ಅಧಿಕಾರಿ ಡಾ ಚಂದ್ರಶೇಖರಯ್ಯ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ ಶಿವಕುಮಾರ್, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ ಪ್ರಕಾಶ್ ಪುಣ್ಯಶೆಟ್ಟಿ, ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಸಚಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪಜಿಲ್ಲಾ ಆರೋಗ್ಯ ಶಿಕ್ಷಾಣಧಿಕಾರಿ ಬಸಯ್ಯ, ಔಷಧಿ ಅಧಿಕಾರಿಗಳಾದ ಬಸವರಾಜ್, ಹಾಜಿ ಮಲೀಂಗ್, ಕವಿತಾ, ಯಶ್ವಂತ ಕುಮಾರ್, ಜಿಲ್ಲಾ ಔಷಧಿ ವ್ಯಾಪಾರಸ್ಥ ಸಂಘದ ಮುರುಳಿ, ಪಿ. ವೆಂಕಟೇಶ, ಮುರಗೇಂದ್ರ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಳ ಫಾರ್ಮಸಿ ಅಧಿಕಾರಿಗಳು, ಔಷಧಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande