ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಸೇವೆ ಅನನ್ಯ
ಹೊಸಪೇಟೆ , 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಆರೋಗ್ಯ ಹಿತದೃಷ್ಟಿಯಿಂದ ರೋಗಿಗಳಿಗೆ ವೈದ್ಯರು ಶಿಫಾರಸ್ಸು ನೀಡಿದ ಔಷಧಗಳನ್ನು ನಿಖರವಾಗಿ ನೀಡುವ ಮೂಲಕ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುವ ಫಾರ್ಮಸಿಸ್ಟ್‍ಗಳ ಸೇವೆಯು ಅನನ್ಯವಾದದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹೇಳಿದ್
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಸೇವೆ ಅನನ್ಯ.


ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಸೇವೆ ಅನನ್ಯ.


ಹೊಸಪೇಟೆ , 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಆರೋಗ್ಯ ಹಿತದೃಷ್ಟಿಯಿಂದ ರೋಗಿಗಳಿಗೆ ವೈದ್ಯರು ಶಿಫಾರಸ್ಸು ನೀಡಿದ ಔಷಧಗಳನ್ನು ನಿಖರವಾಗಿ ನೀಡುವ ಮೂಲಕ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುವ ಫಾರ್ಮಸಿಸ್ಟ್‍ಗಳ ಸೇವೆಯು ಅನನ್ಯವಾದದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹೇಳಿದ್ದಾರೆ.

ನಗರದ ಶ್ರೀವಡಕರಾಯ ದೇವಸ್ಥಾನದ ಬಳಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯ ಜಾಗೃತಿ ಜಾಥಾವನ್ನು ಚಾಲನೆ ನೀಡಿ ಅವರು ಮಂಗಳವಾರ ಮಾತನಾಡಿದರು, ಔಷಧ ಸಂಶೋಧನೆ, ತಯಾರಿಕೆ, ವಿತರಣೆ ಸೇರಿ ಎಲ್ಲ ಹಂತಗಳಲ್ಲೂ ಔಷಧಿ ತಜ್ಞರು ಶ್ರಮಿಸುತ್ತಿದ್ದಾರೆ.

ವೈದ್ಯರಸ್ಟ ಮುಖ್ಯ ಪಾತ್ರವನ್ನು ಔಷಧಿ ತಜ್ಞರು ನಿರ್ವಹಿಸುತ್ತಿದ್ದಾರೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿದು ಔಷಧಿ ತಜ್ಞರು ರೋಗಿಗಳ ಜೀವಿತಾವಧಿಯನ್ನು ಹೆಚ್ವಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ತಜ್ಞ ವೈದ್ಯ ವಿಜ್ಞಾನಿಗಳ ಸಲಹೆ ಮತ್ತು ನಿರ್ದೇಶನ ಫಾರ್ಮಸಿಸ್ಟ್‍ಗಳಿಗೆ ಸಹಕಾರಿಯಾಗಿದೆ. ದಿನಾಚರಣೆಯು ಔಷಧ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾದ ಜ್ಞಾನ ವಿನಿಮಯ, ಸಂಘಟನೆ, ಜನಪರ ಕಾಳಜಿ ಮತ್ತು ಗುಣಮಟ್ಟ ಔಷಧಿಗಳನ್ನು ಕಾಯ್ದುಕೊಳ್ಳುವಂತಹ ವಿವಿಧ ಉದ್ದೇಶಗಳನ್ನು ಹೊಂದಿದೆ ಎಂದರು.

ಜಾಗೃತಿ ಜಾಥಾವು ನಗರದ ಶ್ರೀವಡಕರಾಯ ದೇವಸ್ಥಾನ ಆರಂಭಗೊಂಡು ಮೇನ್ ಬಜಾರ್, ಗಾಂಧಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಡಾ.ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ವಿವಿಧ ಘೋಷಣೆಗಳನ್ನು ಕುಗುತ್ತಾ ಜನಜಾಗೃತಿ ಮೂಡಿಸಲಾಯಿತು.

ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ವಿನೋದ್, ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ.ಬಸವರಾಜ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಸಂತೋμï ಕುಮಾರ್, ಜಿಲ್ಲಾ ಕಾರ್ಯದರ್ಶಿ ವಾಹಿದ್ ತಂಬ್ರಹಳ್ಳಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ರಾಜಶೇಖರ್ ಸ್ವಾಮಿ, ಮಲ್ಲಿಕಾರ್ಜುನ ಕೊತ್ತೂರು, ಚಿದಾನಂದ ಸ್ವಾಮಿ, ಪ್ರಶಾಂತ್ ಪೂಜಾರ್, ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಸತೀಶ್ ವೇಮಲ್, ಉಪಾಧ್ಯಕ್ಷರಾದ ಪಿ.ಸುಬ್ರಮಣ್ಯ, ಪದಾಧಿಕಾರಿಗಳಾದ ಜಾವೇದ್ ಮಹಮ್ಮದ್, ಪ್ರಕಾಶ್ ಜಾಲಿ, ಪ್ರಶಾಂತ್, ಕಿರಣ್ ಕಲಾಲ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande