ಹೊಸ ತಂತ್ರಜ್ಞಾನ ಸೇವೆ ಆರಂಭ : ಅಂಚೆ ಅಧೀಕ್ಷಕ ರಮೇಶ ಮಡಿವಾಳರ
ಗದಗ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಂಚೆ ಇಲಾಖೆಯು ಸ್ಪೀಡ್‌ ಪೋಸ್ಟ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಿದ್ದು, ಅಕ್ಟೋಬರ್‌ 1ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣೆ ಮೂಲಕ ತಿಳಿಸಿದ್ದಾ
ಹೊಸ ತಂತ್ರಜ್ಞಾನ ಸೇವೆ ಆರಂಭ : ಅಂಚೆ ಅಧೀಕ್ಷಕ ರಮೇಶ ಮಡಿವಾಳರ


ಗದಗ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಂಚೆ ಇಲಾಖೆಯು ಸ್ಪೀಡ್‌ ಪೋಸ್ಟ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಿದ್ದು, ಅಕ್ಟೋಬರ್‌ 1ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ದಿನದಿನಕ್ಕೆ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚಗಳನ್ನು ಸರಿದೂಗಿಸಲು ಮತ್ತು ಆದ್ಯತೆಯ ಬಟವಾಡೆ ಸೇವೆಯಾಗಿ ತನ್ನ ಸ್ಥಾನವನ್ನು ಬಲಪಡಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಒಟಿಪಿ ಆಧಾರಿತ ಸುರಕ್ಷತ ವಿತರಣೆ, ಆನ್‌ಲೈನ್ ಪಾವತಿ, ಎಸ್‌ಎಂಎಸ್ ಅಧಿಸೂಚನೆಗಳು ಸೇರಿದಂತೆ ಹಲವು ಗ್ರಾಹಕಸ್ನೇಹಿ ಸೇವೆಗಳನ್ನು ಸಹ ಅಂಚೆಯು ಪರಿಚಯಿಸಿದೆ. ಇದರಿಂದ ದೇಶದ ಎಲ್ಲೆಡೆ ಪತ್ರಗಳು ಮತ್ತು ತ್ವರಿತ ಮತ್ತು ವಿಶ್ವಾಸಾರ್ಹ ವಿತರಣೆಯನ್ನು ಒದಗಿಸಲು ಅಂಚೆ ಇಲಾಖೆಯು ಅ.1 ರಂದು 1986 ರಂದು ಸ್ಪೀಡ್ ಪೋಸ್ಟ ಪರಿಸಚಯಿಸಲಾಯಿತು.

ಇಂಡಿಯಾ ಪೋಸ್ಟ್ ನ ಆಧುನೀಕರಣ ಪ್ರಯತ್ನಗಳ ಭಾಗವಾಗಿ ಆರಂಭಿಸಲಾಗಿರುವ ಈ ಸೇವೆಯು ಸಮಯಕ್ಕೆ ಅನುಗುಣವಾಗಿ ಪರಿಣಾಮಕಾರಿ ಮತ್ತು ಸುರಕ್ಷತೆ ಅಂಚೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ವರ್ಷಗಳು ಕಳೆದಂತೆ ಸ್ಪೀಡ್ ಪೋಸ್ಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಗಳಲ್ಲಿ ಮೊದಲನೇ ಸ್ಥಾನದೊಂದಿಗೆ ಹೊರಹೊಮ್ಮಿದ್ದು, ಖಾಸಗಿ ಕೊರಿಯರ್ ಕಂಪನಿಗಳಿಂತ ಮುಂಚೂಣಿಯಲ್ಲಿ ಬೆಳೆದಿದೆ.

ಆರಂಭದಿಂದಲೂ, ಬದಲಾಗುತ್ತಿರುವ‌ ಗ್ರಾಹಕರ ಅಗತ್ಯ ಗಳನ್ನು ಪೂರೈಸಲು ಸ್ಪೀಡ್ ಪೋಸ್ಟ್ ಹೊಸ ತಂತ್ರಜ್ಞಾನ ದೊಂದಿಗೆ ಸೇವೆ ನೀಡುತ್ತಿದೆ. ಈ ಮೂಲಕ ದೇಶದಲ್ಲಿ ಆದ್ಯತೆಯ ಬಟವಾಡೆ ಸೇವೆಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು, ವಿಶ್ವಾಸಾರ್ಹತೆ, ಭದ್ರತೆ ಮತ್ತು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ದರ ಪರಿಷ್ಕರಣೆಯ ಜತೆಗೆ ಗ್ರಾಹಕಸ್ನೇಹಿ ಸೇವೆಗಳನ್ನು ಕೂಡ ನೀಡಲಾಗುವುದು. ಅಂದರೆ ಒಟಿಪಿ ಆಧಾರಿತ ಸುರಕ್ಷತ ವಿತರಣೆ, ಆನ್‌ಲೈನ್‌ ಪಾವತಿ ಸೌಲಭ್ಯ, ಎಸ್‌ಎಂಎಸ್‌ ಆಧಾರಿತ ಬಟವಾಡೆ ಅಧಿಸೂಚನೆಗಳು, ಅನುಕೂಲಕರ ಆನ್‌ಲೈನ್‌ ಬುಕ್ಕಿಂಗ್‌ ಸೇವೆಗಳು, ಪ್ರತಿ ಹಂತದಲ್ಲೂ ಬಟವಾಡೆ ಅಪ್‌ಡೇಟ್‌ಗಳು, ಇಚ್ಛಿತ ಬಳಕೆದಾರರಿಗೆ ನೋಂದಣಿ ಸೌಲಭ್ಯಗಳನ್ನು ಒದಗಿಸಲಾಗುವುದು. ಹೀಗಾಗಿ, ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.

ದಾಖಲೆಗಳು ಮತ್ತು ಪಾರ್ಸೆಲ್‌ಗಳೆರಡಕ್ಕೂ ಸ್ಪೀಡ್‌ ಪೋಸ್ಟ್‌ನಡಿ ಮೌಲ್ಯವರ್ಧಿತ ಸೇವೆಯಾಗಿ ನೋಂದಣಿ ಸೌಲಭ್ಯ ದೊರೆಯುತ್ತದೆ. ಗ್ರಾಹಕರಿಗೆ ವಿಶ್ವಾಸ ಮತ್ತು ವೇಗದ ಸೇವೆ ಒದಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಂಡು ವಿಳಾಸದಾರರಿಗೆ ನಿರ್ದಿಷ್ಟವಾದ ಸುರಕ್ಷತ ಬಟವಾಡೆ ಸೇವೆ ಒದಗಿಸಲಾಗುತ್ತದೆ. 'ನೋಂದಣಿ'ಯ ಮೌಲ್ಯವರ್ಧಿತ ಸೇವೆಗೆ ಪ್ರತಿ ಸ್ಪೀಡ್‌ ಪೋಸ್ಟ್‌ ವಸ್ತುವಿಗೆ (ಡಾಕ್ಯುಮೆಂಟ್‌/ಪಾರ್ಸೆಲ್‌) 15 ರೂ. ಜತೆಗೆ ಅನ್ವಯವಾಗುವಂತೆ ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಲ್ಲಿ ವಸ್ತುವನ್ನು ವಿಳಾಸದಾರರು ಅಥವಾ ವಿಳಾಸದಾರರಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ವ್ಯಕ್ತಿಗೆ ಪ್ರತ್ಯೇಕವಾಗಿ ತಲುಪಿಸಲಾಗುತ್ತದೆ.

ಅದೇ ರೀತಿ, ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ವಿತರಣೆಯ ಮೌಲ್ಯವರ್ಧಿತ ಸೇವೆಗೆ ಪ್ರತಿ ಸ್ಪೀಡ್‌ ಪೋಸ್ಟ್‌ನ ವಸ್ತುವಿಗೆ (ಡಾಕ್ಯುಮೆಂಟ್‌/ಪಾರ್ಸೆಲ್‌) 5 ರೂ. ಶುಲ್ಕ ಮತ್ತು ಅದಕ್ಕೆ ಅನುಗುಣವಾಗಿ ಅನ್ವಯವಾಗುವ ಜಿಎಸ್‌ಟಿ ದರವೂ ಲಭಿಸಲಿದೆ.

ತಂತ್ರಜ್ಞಾನ ಆಧಾರದಡಿ ವಿತರಣಾ ಸಿಬ್ಬಂದಿಗೆ ವಿಳಾಸದಾರರಿಂದ ಒದಗಿಸಲಾಗುವ ಒಟಿಪಿಯ ಯಶಸ್ವಿ ದೃಢೀಕರಣದ ನಂತರವೇ ವಸ್ತುವನ್ನು ವಿಳಾಸದಾರರಿಗೆ ನೀಡಲಾಗುತ್ತದೆ. ಹೊಸ ತಂತ್ರಜ್ಞಾನದ ಆಧಾರಿತ ವಿತರಣೆ ಸವಲತ್ತುನ್ನು ಸ್ಪೀಡ್ ಪೋಸ್ಟ್ ಸೇವೆಯನ್ನು ಪತ್ರ ವ್ಯವಹಾರ ಮತ್ತು ಪಾರ್ಸೆಲ್‌ ಸಾಗಣೆ ಮಾಡುವ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶೇ.10 ವಿನಾಯಿತಿ

ವಿದ್ಯಾರ್ಥಿಗಳಿಗೆ ಸ್ಪೀಡ್‌ ಪೋಸ್ಟ್‌ ಸೇವೆಗಳು ಕೈಗೆಟುಕುವಂತೆ ಮಾಡಲು, ಸ್ಪೀಡ್‌ ಪೋಸ್ಟ್‌ ದರದ ಮೇಲೆ ಶೇ.10ರಷ್ಟು ವಿನಾಯಿತಿಯೊಂದಿಗೆ ಒದಗಿಸಲಾಗಿದೆ. ಅಷ್ಟೇ, ಅಲ್ಲದೆ, ಹೊಸದಾಗಿ ಸೇರ್ಪಡೆಯಾಗುವ ಬೃಹತ್‌ ಗ್ರಾಹಕರಿಗೆ ಶೇ.5ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ರಿಯಾಯಿತಿ ಅವಕಾಶವನ್ನು ಪ್ರಯೋಜ ಪಡೆಯಲು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande