ಮಹಾನಗರ ಪಾಲಿಕೆಯಿಂದ ಅಕ್ಟೋಬರ್ 02ರಂದು ನಾಡದೇವಿ ಮೆರವಣಿಗೆ
ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 02ರ ಮಧ್ಯಾಹ್ನ 1 ಗಂಟೆಗೆ ಪಾಲಿಕೆ ಜೋನಲ್ 1ರ ಕಚೇರಿಯಿಂದ ಮಾಣಿಕಪ್ರಭು ಬನ್ನಿ ಮಂಟಪದವರೆಗೆ ನಾಡದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಿಲ್ಲೇ ಬೃಹನ್ಮಠದ 108 ಸಾವಿರ
ಮಹಾನಗರ ಪಾಲಿಕೆಯಿಂದ ಅಕ್ಟೋಬರ್ 02ರಂದು ನಾಡದೇವಿ ಮೆರವಣಿಗೆ


ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 02ರ ಮಧ್ಯಾಹ್ನ 1 ಗಂಟೆಗೆ ಪಾಲಿಕೆ ಜೋನಲ್ 1ರ ಕಚೇರಿಯಿಂದ ಮಾಣಿಕಪ್ರಭು ಬನ್ನಿ ಮಂಟಪದವರೆಗೆ ನಾಡದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಕಿಲ್ಲೇ ಬೃಹನ್ಮಠದ 108 ಸಾವಿರ ದೇವರ ಸಂಸ್ಥಾನದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರವ್ಮದ ಸಾನ್ನಿಧ್ಯ ವಹಿಸಲಿದ್ದಾರೆ.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಉದ್ಘಾಟಿಸುವರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಘನ ಉಪಸ್ಥಿತಿ ವಹಿಸುವರು.

ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್ ಅವರು ನಾಡದೇವಿ ಭುನೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.

ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಪಾಲಿಕೆಯ ಉಪಾಧ್ಯಕ್ಷರಾದ ಜೆ.ಸಾಜೀದ್ ಸಮೀರ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಗಳಾದ ಪುಟ್ಟಮಾದಯ್ಯ ಎಂ, ಪಾಲಿಕೆಯ ಸದಸ್ಯರಾದ ಲಕ್ಷ್ಮೀ, ಡಿ.ಎ ಸಿಮನ್, ಜಯಣ್ಣ, ವಿ.ನಾಗರಾಟ, ಬಿ.ರಮೇಶ, ಶರಣಬಸಪ್ಪ ಬಲ್ಲಟಗಿ, ಬುಜ್ಜಮ್ಮ ಶಂಕರಪ್ಪ, ಅನಿತಾ ಜಿ.ತಿಮ್ಮಾರೆಡ್ಡಿ, ನಿಮಿತ್ ಸಲ್ಯಾ ಮಹ್ಮದ್ ಶಾಲಂ, ಖುರ್ಷಿದಾ ಬಾನು ಅಬ್ದುಲ್ ವಾಹಿದ್, ದರೂರ ಬಸವರಾಜ ಪಾಟೀಲ್, ರತ್ನ ಪ್ರಶಾಂತಿ, ಎಂ ಪವನ್ ಕುಮಾರ ಎಂ.ಈರಣ್ಣ, ಉಮಾ ರವೀಂದ್ರ ಜಲ್ದಾರ,

ನೂರ ಪಾμÁ ಎಸ್, ಗಾಯತ್ರಿ ಹರೀಶ ನಾಡಗೌಡ, ಈ ಶಶಿರಾಜ, ಲಂತಾ ಕಡಗೋಲ್ ಅಂಜಿನಯ್ಯ, ಹೇಮಲತಾ ಪಿ.ಬೂದೆಪ್ಪ, ಎನ್.ಕೆ.ನಾಗರಾಜ, ಜಿಂದಪ್ಪ, ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ಎನ್. ಶ್ರೀನಿವಾಸರೆಡ್ಡಿ, ರೇಖಾ ಮಹೀಂದ್ರರೆಡ್ಡಿ, ಶೈನಾಜ್ ಬೇಗಂ ಜಿ.ಹೆಚ್.ಪಾಜಿಬಾಬು, ಪಿ.ನವನೀತಾ ಪಿ. ಶ್ರೀನಿವಾಸ ರೆಡ್ಡಿ, ಕವಿತಾ ಜಿ. ತಿಮ್ಮಾರೆಡ್ಡಿ , ಸುನೀಲ್ ಕುಮಾರ್, ವೆಂಕಟಮ್ಮ ಎನ್. ಶ್ರೀನಿವಾಸರೆಡ್ಡಿ, ಅಂಜನಮ್ಮ ಶ್ಯಾಮಸುಂದರ್, ಸಮೀನಾ ಮುಕ್ರಂ, ಸಣ್ಣ ನರಸರೆಡ್ಡಿ, ತಿಮ್ಮಪ್ಪ ನಾಗೇಂದ್ರಪ್ಪ, ಸ್ವಾತಿ ಹರಿಬಾಬು, ನಾಮ ನಿರ್ದೇಶಿತ ಸದಸ್ಯರಾದ ಮಹ್ಮದ್ ಫೆರೋಜ್, ವೆಂಕಟೇಶ, ಅಮಿತ್ ಕುಮಾರ ಲೋಧ, ಮಣಿಕಂಠ, ಮುನಿಸ್ವಾಮಿ ಹಾಗೂ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಾಪಾತ್ರ, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಶರಣಬಸಪ್ಪ ಕೋಟೆಪ್ಪಗೋಳ, ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷರಾಣಿ ಎಂ., ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಮೇನಕಾ ಪಟೇಲ್ ಅವರು ಭಾಗಿಯಾಗಲಿದ್ದಾರೆ ಎಂದು ಪಾಲಿಕೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande