ಮಾನವೀಯತೆ ಮೆರೆದ ಮುಸ್ಲಿಂ ರೈತ ಮುಲ್ಲಾ
ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭೀಮಾ ನದಿಯ ಪ್ರವಾಹದ ಸಂತ್ರಸ್ತರಿಗೆ ಮುಸ್ಲಿಂ ರೈತ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮುಸ್ಲಿಂ ರೈತ ದಸಗೀರ ಮುಲ್ಲಾ ಅಕ್ಕಿ, ಗೋಧಿ,‌ ಬೆಳೆ,
ಸಂತ್ರಸ್ತರು


ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭೀಮಾ ನದಿಯ ಪ್ರವಾಹದ ಸಂತ್ರಸ್ತರಿಗೆ ಮುಸ್ಲಿಂ ರೈತ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮುಸ್ಲಿಂ ರೈತ ದಸಗೀರ ಮುಲ್ಲಾ ಅಕ್ಕಿ, ಗೋಧಿ,‌ ಬೆಳೆ, ಸಾಬೂನ, ಪುಟಾಣಿ ಸೇರಿದಂತೆ ಎಲ್ಲ ರೀತಿಯ ದಿನಸಿ ವಿತರಣೆ ಮಾಡಿದರು.‌

ಭೀಮಾ ನದಿಯ ಪ್ರವಾಹದಲ್ಲಿ ಸ್ವಂತ ಜಮೀನಿನಲ್ಲಿ‌ ಬೆಳೆದ ಬೆಳೆಗಳು ನಾಶವಾದರೂ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿದರು.‌ ಅಲ್ಲದೇ, ಕಳೆದ ಎರಡು ದಿನಗಳಲ್ಲಿ ರಾಜಕಾರಣಿಗಳು ಗಂಜಿ ಕೇಂದ್ರಕ್ಕೆ ಬಂದರೂ ಯಾವುದೇ ಸಾಮಗ್ರಿಗಳನ್ನು ನೀಡಿಲ್ಲ ಎಂದು ಸಂತ್ರಸ್ತರು ನೋವನ್ನು ಹೊರಕ್ಕೆ ಹಾಕಿದ್ದಾರೆ.

ಆದರೆ ಸ್ವಂತ ಜಮೀನು ಮುಳಗಿದ ರೂ ರೈತ ಮುಲ್ಲಾ ಸಹಾಯಕ್ಕೆ ಮುಂದಾಗಿದ್ದು, ಸಂತಸ ತಂದಿದೆ ಎಂದು ಸಂತ್ರಸ್ತರು ಹರ್ಷ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande