ಜಾತಿ ಸಮೀಕ್ಷೆಯಲ್ಲಿ ಒಗ್ಗಟ್ಟು ಕಾಪಾಡಿ : ಮೋಹನ್ ಲಿಂಬಿಕಾಯಿ
ಹುಬ್ಬಳ್ಳಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಾತಿ ಸಮೀಕ್ಷೆಯಲ್ಲಿ ವೀರಶೈವ/ಲಿಂಗಾಯತ ಸಮಾಜದವರು ‘ಲಿಂಗಾಯತ’ ಎಂದು ಮಾತ್ರ ನಮೂದಿಸಿ, ಉಪಜಾತಿ ಕಾಲಂನಲ್ಲಿ ತಮ್ಮ ಒಳಪಂಗಡದ ಹೆಸರನ್ನು ಬರೆಯಬೇಕು. ಪ್ರತ್ಯೇಕವಾಗಿ ಒಳಪಂಗಡವನ್ನು ಮುಖ್ಯ ಜಾತಿಯಾಗಿ ನಮೂದಿಸುವ ತಪ್ಪು ಮಾಡಬಾರದು” ಎಂದು ವಿಧಾನ ಪರಿಷತ್ತ
Mohan


ಹುಬ್ಬಳ್ಳಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಾತಿ ಸಮೀಕ್ಷೆಯಲ್ಲಿ ವೀರಶೈವ/ಲಿಂಗಾಯತ ಸಮಾಜದವರು ‘ಲಿಂಗಾಯತ’ ಎಂದು ಮಾತ್ರ ನಮೂದಿಸಿ, ಉಪಜಾತಿ ಕಾಲಂನಲ್ಲಿ ತಮ್ಮ ಒಳಪಂಗಡದ ಹೆಸರನ್ನು ಬರೆಯಬೇಕು. ಪ್ರತ್ಯೇಕವಾಗಿ ಒಳಪಂಗಡವನ್ನು ಮುಖ್ಯ ಜಾತಿಯಾಗಿ ನಮೂದಿಸುವ ತಪ್ಪು ಮಾಡಬಾರದು” ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸಮಾಜದ ಬಂಧುಗಳಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಸರ್ಕಾರ ಜಾತಿ ಸಮೀಕ್ಷೆ ಆರಂಭಿಸಿದೆ. ನಮ್ಮ ಸಮಾಜ ರಾಜ್ಯದ ದೊಡ್ಡ ಸಮುದಾಯವಾಗಿದ್ದರೂ, ಕೆಲವು ಒಳಪಂಗಡದ ನಾಯಕರು ಮತ್ತು ಪದಾಧಿಕಾರಿಗಳ ತಪ್ಪಾದ ಸಲಹೆಯಿಂದ, ಹಿಂದಿನ ಬಾರಿ ನಮ್ಮ ಜನಸಂಖ್ಯೆ 1.5 ಕೋಟಿಯಿಂದ 66 ಲಕ್ಷಕ್ಕೆ ಇಳಿದಂತೆ ತೋರ್ಪಡಿತು. ಇದರಿಂದ ನಾವು ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟೆವು. ಮತ್ತೆ ಇದೇ ತಪ್ಪು ನಡೆಯಬಾರದು ಎಂದಿದ್ದಾರೆ.

ಮುಂದೊಂದು ದಿನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದು, ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಮಾನ್ಯತೆಯೂ ದೊರೆಯುವುದು ಖಚಿತವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾವು ಸಂಕುಚಿತ ಮನೋಭಾವದಿಂದ ಒಳಪಂಗಡದ ಮೀಸಲಾತಿಗಾಗಿ ಬೇರೆ ಜಾತಿ ನಮೂದಿಸಿದರೆ, ಸಮಾಜದ ಶಕ್ತಿ ಕುಗ್ಗಿ, ಸಾಮಾಜಿಕ-ರಾಜಕೀಯವಾಗಿ ದೊಡ್ಡ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಹಾಸಭೆಯ ನಾಯಕರು ಮತ್ತು ಸ್ವಾಮೀಜಿಗಳು ತಕ್ಷಣ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ಅವರು ಒತ್ತಾಯಿಸಿ, ಸಮಾಜದ ಒಗ್ಗಟ್ಟು ಮುರಿಯಬಾರದು, ಎಲ್ಲರೂ ಒಂದಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande