ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನರ‍್ದೇಶಕರಾದ ವಿರೇಶ ನಾಯಕ ಅವರು ಸೆಪ್ಟೆಂಬರ್ 30ರ ಮಂಗಳವಾರ ದಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಇಲಾಖೆಯ ಕ್ರೀಡಾಂಗಣ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಮೊದಲು ಜಿಲ್ಲೆಯ ಸಿರವಾರ ಪಟ್ಟಣದ ಹೊರ ವಲಯದಲ್ಲಿ ಸುಮಾರು 8 ಎಕರೆ ವಿಸ್ತರ‍್ಣದ ನರ‍್ಮಾಣವಾಗುತ್ತಿರುವ ತಾಲೂಕು ಕ್ರೀಡಾಂಗಣ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಕಾಮಗಾರಿಯು ಗುಣಮಟ್ಟದ ದಿಂದ ಹಾಗೂ ನಿಗದಿತ ಸಮಯದಲ್ಲಿ ಪರ‍್ಣಗೊಳಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕವಿತಾಳ ಪಟ್ಟಣದಲ್ಲಿ ನೂತನವಾಗಿ ನರ‍್ಮಾಣವಾಗುತ್ತಿರುವ ಕಾಮಗಾರಿಯಯ ಪರಿಶೀಲಿಸಿ ಗ್ರಾಮೀಣ ಕ್ರೀಡಾಪಟುಗಳಿಗೆ ಬೇಕಾಗುವ ಎಲ್ಲಾ ರೀತಿಯ ಕ್ರೀಡಾಂಗಣವನ್ನು ನರ‍್ಮಿಸಿ ಅನುಕೂಲ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಸಂಭವು ಸೇರಿದಂತೆ ಇತರರು ಇದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್