ಸೂರ್ಯಕಾಂತಿ, ಹೆಸರು ಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳ ಖರೀದಿ
ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರು ಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕಪೋರ್ಸ ಸಮಿತಿಯ ಅಧ್ಯಕ್ಷರಾದ ಸಂಗಪ್ಪ ಪ್ರಕಟಣೆಯಲ
ಡಿಸಿ


ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರು ಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕಪೋರ್ಸ ಸಮಿತಿಯ ಅಧ್ಯಕ್ಷರಾದ ಸಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕ್ರಾಂತಿ ಪ್ರತಿ ಕ್ವಿಂಟಲ್‌ಗೆ ೭,೭೨೧ ರೂ. ದರದಂತೆ ಪ್ರತಿ ಎಕರೆಗೆ ೪ ಕ್ವಿಂಟಲ್‌ನAತೆ ಪ್ರತಿ ರೈತರಿಂದ ಗರಿಷ್ಟ ಪ್ರಮಾಣ ೨೦ ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ಹೆಸರುಕಾಳು ಪ್ರತಿ ಕ್ವಿಂಟಲ್‌ಗೆ ೮೭೬೮ ರೂ.ಗಳಂತೆ ಪ್ರತಿ ಎಕರೆಗೆ ೩ ಕ್ವಿಂಟಲ್ ನಂತೆ ಗರಿಷ್ಟ ೧೫ ಕ್ವಿಂಟಲ್ ಹಾಗೂ ಉದ್ದಿನಕಾಳು ಪ್ರತಿ ಕ್ವಿಂಟಲ್‌ಗೆ ೭೮೦೦ ರೂ.ಗಳಂತೆ ಪ್ರತಿ ಎಕರೆಗೆ ೫ ಕ್ವಿಂಟಲ್ ನಂತರ ಪ್ರತಿ ರೈತರಿಂದ ಗರಿಷ್ಟ ೩೦ ಕ್ವಿಂಟಲ್ ಖರೀದಿಸಲಾಗುತ್ತದೆ. ಸೋಯಾಬಿನ್ ಪ್ರತಿ ಕ್ವಿಂಟಲ್‌ಗೆ ೫೩೨೮ ರೂ.ಗಳಂತೆ ಪ್ರತಿ ಎಕರೆಗೆ ೫ ಕ್ವಿಂಟಲ್‌ನAತೆ ಗರಿಷ್ಟ ೨೦ ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.

ಖರೀದಿ ಅವಧಿಯನ್ನು ೯೦ ದಿನಗಳ ವರೆಗೆ ನಿಗದಿಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಗೊಳಿಸಲಾಗುತ್ತಿದೆ. ಜಿಲ್ಲೆಯ ರೈತರು ನೋಂದಣಿ ಹಾಗೂ ಖರೀದಿ ಕೇಂದ್ರಗಳಲ್ಲಿ ಆಧಾರ ಕಾರ್ಡ, ಪಹಣಿ ಪತ್ರಿಕೆ, ಆಧಾರ ಲಿಂಕ ಆಗಿರುವ ರಾಷ್ಟ್ರೀಕೃತ ಬ್ಯಾಮಕಿನ ಪಾಸಬುಕ್ಕ ಪ್ರತಿಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ಜಿಲ್ಲಾ ಶಾಖಾ ವ್ಯವಸ್ಥಾಪಕರ ಕಚೇರಿ (೯೪೪೯೮೬೪೪೫೮), ಸಹಾಯಕ ನಿರ್ದೇಶಕರು, ಎಪಿಎಂಸಿ, ಬಾಗಲಕೋಟೆ (೯೪೪೮೧೦೦೭೭೯)ಗೆ ಸಂಪರ್ಕಿಸುವAತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande