ದೀಕ್ಷಾಭೂಮಿ ಯಾತ್ರೆಗೆ ಎಡಿಸಿ ಅಶೋಕ ತೇಲಿ ಚಾಲನೆ
ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯ ದಶಮಿಯಂದು ನಾಗಪೂರದಲ್ಲಿ ನಡೆಯಲಿರುವ ಪ್ರವರ್ತನಾ ದಿನದ ದೀಕ್ಷಾಭೂಮಿ ಯಾತ್ರೆಗೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಂಗಳವಾರ ಚಾಲನೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸುವ ಮೂಲಕ ದೀಕ್ಷಾ ಭೂಮಿ ಯ
ಡಿಸಿ


ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯ ದಶಮಿಯಂದು ನಾಗಪೂರದಲ್ಲಿ ನಡೆಯಲಿರುವ ಪ್ರವರ್ತನಾ ದಿನದ ದೀಕ್ಷಾಭೂಮಿ ಯಾತ್ರೆಗೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಂಗಳವಾರ ಚಾಲನೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸುವ ಮೂಲಕ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಬಂತೇಜ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ, ಜಿ.ಪಂ ಸಹಾಯಕ ಯೋಜನಾ ನಿರ್ದೇಶಕ ಭೀಮಪ್ಪ ತಳವಾರ ಸೇರಿದಂತೆ ಸಮುದಾಯದ ಮುಖಂಡರಾದ ಪರಶುರಾಮ ನೀಲನಾಯಕ, ಮುತ್ತಣ್ಣ ಭಗವತಿ ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande