ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವ ಒಕ್ಕೂಟದ ಬಲವರ್ಧನೆಗೆ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ ಜಿಲ್ಲಾ ನಿರ್ದೇಶಕರು ರೋಹಿತಾಕ್ಷ ಅವರು ಕರೆ ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ -1 ತಾಲೂಕಿನ ಗಾಂಧಿನಗರ ವಲಯದ ಸ್ವ-ಸಹಾಯ ಸಂಘಗಳ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶ ಸಂಪೂರ್ಣ ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದರೆ ಸ್ವಸಹಾಯ ಸಂಘಗಳ ಸೇವೆ ಎಷ್ಟು ಅವಶ್ಯಕತೆ ಇದೆ ಎಂದು, ಗ್ರಾಮೀಣ ಪ್ರಾಂತ್ಯದಲ್ಲಿ ಮತ್ತು ನಗರ ವ್ಯಾಪ್ತಿಯಲ್ಲಿ ಕಡು ಬಡ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಒಕ್ಕೂಟದ ಪ್ರಬಂಧಕರು ಹಾಗೂ ಸಂಘದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.
ರೂಪಶ್ರೀ, ಒಕ್ಕೂಟಗಳ ಜವಾಬ್ದಾರಿಯಿಂದ ಸಂಘಗಳ ನಿರ್ವಹಿಸುತ್ತ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಸರಿಯಾದ ಸಮಯಕ್ಕೆ ಸದಸ್ಯರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡುವುದರ ಜೊತೆಗೆ, ಅವರಿಗೆ ಸಾಲ ಮಂಜೂರಾತಿ ಹಾಗೂ ಮರಪಾವತಿಯ ಬಗ್ಗೆ ಸಂಘದ ಸದಸ್ಯರಿಗೆ ಅರಿವು ಮೂಡಿಸುವಬೇಕು. ಸಂಘದ ಸದಸ್ಯರು ಕೂಡ ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ಸ್ವ-ಸಹಾಯ ಸಂಘಗಳು ಮತ್ತಷ್ಟು ಆರ್ಥಿಕ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ವ್ಯಕ್ತಿಗತ ಕುಟುಂಬ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ಒಕ್ಕೂಟ ಅಧ್ಯಕ್ಷರು ಶ್ರೀಮತಿ ರೂಪ ಶ್ರೀ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಳ್ಳಾರಿ-1 ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಬಸವರಾಜ .ಕೆ, ಬಳ್ಳಾರಿ ಜಿಲ್ಲಾ ಕಚೇರಿ ಎಂ,ಐ,ಎಸ್ ಯೋಜನಾಧಿಕಾರಿಗಳು ಬಸವರಾಜ್, ಗಾಂಧಿನಗರ ವಲಯದ ಮೇಲ್ವಿಚಾರಕರಾದ ಮಹಮ್ಮದ್ ರಫೀಕ್, ಅಧ್ಯಕ್ಷರು ನೆಹರೂ ಕಾಲೋನಿ ಒಕ್ಕೂಟ ಶ್ರೀಮತಿ ಬಸವರಾಜೇಶ್ವರಿ, ಉಪಾಧ್ಯಕ್ಷರು ಶ್ರೀಮತಿ ರಾಘಸುಧಾ, ಶ್ರೀಮತಿ ಲಕ್ಷ್ಮೀ ನಾಯ್ಕ್, ಶಾಂತ, ತಿಪ್ಪಮ್ಮ, ಸರಸ್ವತಿ ಹಾಗೂ ಗಾಂಧಿನಗರ ವಲಯದ ಸೇವಾ ಪ್ರತಿನಿಧಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿ, ಪಂಕಜಾಕ್ಷಿ, ಗೌಸಿಯ, ಶೈಲಜಾ, ಮೀನಾಕ್ಷಿ, ಐಶ್ವರ್ಯ ಮತ್ತು ಸ್ವ ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್