ಬಳ್ಳಾರಿ : ಶ್ರೀ ಕನಕದುರ್ಗಮ್ಮ ದೇವಸ್ಥಾನದ ಗಣಕೀಕೃತ ರಸೀದಿ ವ್ಯವಸ್ಥೆ, ವೆಬ್ ಸೈಟ್ ಬಿಡುಗಡೆ
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ದಸರಾ ಮಹೋತ್ಸವ-2025ರ ಅಂಗವಾಗಿ ಧಾರ್ಮಿಕ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇವಸ್ಥಾನದ ಗಣಿಕೀಕೃತ ರಸೀದಿ ವ್ಯವಸ್ಥೆ ಹಾಗೂ ದೇವಸ್ಥಾನ ವೆಬ್ ಸೈಟ್ ಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡ
ಬಳ್ಳಾರಿ: ಶ್ರೀ ಕನಕದುರ್ಗಮ್ಮ ದೇವಸ್ಥಾನದ ಗಣಕೀಕೃತ ರಸೀದಿ ವ್ಯವಸ್ಥೆ, ವೆಬ್ ಸೈಟ್ ಬಿಡುಗಡೆ


ಬಳ್ಳಾರಿ: ಶ್ರೀ ಕನಕದುರ್ಗಮ್ಮ ದೇವಸ್ಥಾನದ ಗಣಕೀಕೃತ ರಸೀದಿ ವ್ಯವಸ್ಥೆ, ವೆಬ್ ಸೈಟ್ ಬಿಡುಗಡೆ


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ದಸರಾ ಮಹೋತ್ಸವ-2025ರ ಅಂಗವಾಗಿ ಧಾರ್ಮಿಕ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇವಸ್ಥಾನದ ಗಣಿಕೀಕೃತ ರಸೀದಿ ವ್ಯವಸ್ಥೆ ಹಾಗೂ ದೇವಸ್ಥಾನ ವೆಬ್ ಸೈಟ್ ಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಎಲ್ಲಾ ಜಾತಿ, ಮತ-ಧರ್ಮದ ಭೇದಭಾವವಿಲ್ಲದೇ ದೇವಿಯನ್ನು ಪೂಜಿಸುವ ನಗರದ ಏಕೈಕ ಆರಾಧ್ಯ ದೇವಿಯು ಶ್ರೀ ಕನಕದುರ್ಗಮ್ಮ. ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಯೋಜನಾ ಕಾರ್ಯಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ದೇವಿಯ ಆರ್ಶೀವಾದದಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ದೇವಿಯ ಕೃಪೆ ಎಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿದ ಅವರು, ದಸರಾ ಮಹೋತ್ಸವದ ನವರಾತ್ರಿಯ ಶುಭಾಶಯ ತಿಳಿಸಿದರು.

ದೇವಸ್ಥಾನದಲ್ಲಿ 11 ದಿವಸಗಳ ಕಾಲ ನಡೆಯುವ ದಸರಾ ಹಬ್ಬದ ಎಲ್ಲಾ ಕಾರ್ಯಕ್ರಮಗಳನ್ನು ಸಾರ್ವಜನಿಕರು ಭಾಗವಹಿಸಿ ಅಸ್ವಾದಿಸಬೇಕು ಎಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಸಾರ್ವಜನಿಕರು ದೇವಸ್ಥಾನದ ಮಾಹಿತಿಗಾಗಿ ಆನ್ ಲೈನ್ ವೆಬ್‌ಸೈಟ್ WWW.kanakadurgammaballari.com ಗೆ ಭೇಟಿ ನೀಡಬಹುದು.

ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ಪಿ.ಪ್ರಮೋದ್, ಪಾಲಿಕೆಯ ಸದಸ್ಯರಾದ ಪಿ.ಗಾದೆಪ್ಪ, ಹನುಮಂತಪ್ಪ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande