ರಾಯಚೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ದಸರಾ ಹಬ್ಬದ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.
ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಸರಾ ಹಬ್ಬದ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ, ಪಾಲಿಕೆಯ ಹಿರಿಯ ಸದಸ್ಯೆ ಜಯಣ್ಣ ಹಾಗೂ ಈ.ಶಶಿರಾಜ ಅವರು ಮಾತನಾಡಿ, ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಕರ್ಷಣೀಯ ಕಲಾ ತಂಡಗಳು ದಸರಾ ಹಬ್ಬದಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಮೆಕ್ಕಾ ದರವಾಜದಲ್ಲಿ ಕವಿಗೋಷ್ಠಿಯ ಅಂಗವಾಗಿ ಹೆಸರಾಂತ ಕವಿಗಳನ್ನು ಸಾಹಿತಿಗಳನ್ನು ಕರೆಯಿಸಿ ವಿಜೃಂಭಣೆಯಿ0ದ ಜರುಗಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಸಾಜೀದ್ ಸಮೀರ, ಸದಸ್ಯರಾದ ದರೂರು ಬಸವರಾಜ ಪಾಟೀಲ, ವಿ.ನಾಗರಾಜ ನಾಮ ನಿರ್ದೇಶಿತ ಸದಸ್ಯರಾದ ಮುನಿಯಪ್ಪ, ಮಹ್ಮದ್ ಫಿರೋಜ್, ವೆಂಕಟೇಶ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನರಸಿಂಹಲು ಮಾಡಿಗಿರಿ, ಮಹಾನಗರ ಪಾಲಿಕೆಯ ಆಡಳಿತ ಉಪ ಆಯುಕ್ತರಾದ ಸಂತೋಷ ರಾಣಿ, ವಲಯ ಆಯುಕ್ತರಾದ ಬಸವರಾಜ ಹೆಬ್ಬಾಳ, ಮಲ್ಲಿಕಾರ್ಜುನ ಎಂ.ಬಿ., 2ನೇ ವಲಯ ಆಯುಕ್ತರಾದ ಜಯಪಾಲ ರೆಡ್ಡಿ, ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ, ಕಂದಾಯ ಅಧಿಕಾರಿಗಳಾದ ನರಸಿಂಹರೆಡ್ಡಿ, ಕಲಾವಿದರಾದ ವಿ.ಎಚ್. ಮಾಸ್ಟರ್ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಹಾಗೂ ನಗರದ ಸಾರ್ವಜನಿಕರು, ಮಹಾನಗರ ಪಾಲಿಕೆ ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್