ರಾಯಚೂರು : ಸೆ.26ಕ್ಕೆ ವಿದ್ಯುತ್ ವ್ಯತ್ಯಯ
ರಾಯಚೂರು , 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ವ್ಯಾಪ್ತಿಯ ಮುಸ್ ವಡವಟ್ಟಿ 110ಕೆವಿ ಉಪ ಕೇಂದ್ರದಲ್ಲಿ ಸ್ಟೇಷನ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಸೆ.26ರ ಬೆಳಗ್ಗೆ 09 ರಿಂದ ಸಾಯಂಕಾಲ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾ
ರಾಯಚೂರು : ಸೆ.26ಕ್ಕೆ ವಿದ್ಯುತ್ ವ್ಯತ್ಯಯ


ರಾಯಚೂರು , 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ವ್ಯಾಪ್ತಿಯ ಮುಸ್ ವಡವಟ್ಟಿ 110ಕೆವಿ ಉಪ ಕೇಂದ್ರದಲ್ಲಿ ಸ್ಟೇಷನ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಸೆ.26ರ ಬೆಳಗ್ಗೆ 09 ರಿಂದ ಸಾಯಂಕಾಲ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಅಂದು ಬೆಳಿಗ್ಗೆ 9ಗಂಟೆಯಿ0ದ ಗದ್ವಾಲ್ ರೋಡ್ ಇಂಡಸ್ಟಿಯಿಲ್ ಏರಿಯಾ, ಬಸವನಭಾವಿ ಚೌಕ್, ದೇವಿ ನಗರ, ಹರಿಜನವಾಡ, ನವಾಬ್‌ಗಡ್ಡ, ಎನ್.ಜಿ.ಓ ಕಾಲೋನಿ, ಜಲಾಲ್ ನಗರ, ಮಾರ್ಕೇಟ್ ಯಾರ್ಡ್, ನೀರಭಾವಿ ಕುಂಟಾ, ಬಸವನಭಾವಿ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ನಿರಂತರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande