ಮಾಜಿ ಸೈನಿಕರಿಗೆ ಸಂಪರ್ಕ ಕಾರ್ಯಕ್ರಮ
ಧಾರವಾಡ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬೆಳಗಾವಿ ರಕ್ಷಣಾ ಇಲಾಖೆಯ ಮರಾಠಾ ಲೈಟ ಇನ್‍ಫಂಟ್ರಿ ಸೆಂಟರ್‍ನಿಂದ ಬೆಳಗಾವಿ ನಗರದ ಶಿವಾಜಿ ಸ್ಟೇಡಿಯಂನಲ್ಲಿ ಅಕ್ಟೋಬರ 19, 2025 ರಂದು ಬೆಳಿಗ್ಗೆ 8:30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳಿಗಾಗಿ ಸಂಪರ್ಕ ಸಭೆ ಆಯೋಜಿಸಲಾಗ
ಮಾಜಿ ಸೈನಿಕರಿಗೆ ಸಂಪರ್ಕ ಕಾರ್ಯಕ್ರಮ


ಧಾರವಾಡ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿ ರಕ್ಷಣಾ ಇಲಾಖೆಯ ಮರಾಠಾ ಲೈಟ ಇನ್‍ಫಂಟ್ರಿ ಸೆಂಟರ್‍ನಿಂದ ಬೆಳಗಾವಿ ನಗರದ ಶಿವಾಜಿ ಸ್ಟೇಡಿಯಂನಲ್ಲಿ ಅಕ್ಟೋಬರ 19, 2025 ರಂದು ಬೆಳಿಗ್ಗೆ 8:30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳಿಗಾಗಿ ಸಂಪರ್ಕ ಸಭೆ ಆಯೋಜಿಸಲಾಗಿದೆ.

ಸದರಿ ಶಿಬಿರದಲ್ಲಿ ಮಾಜಿ ಸೈನಿಕರ ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಿ, ಸಂಬಂಧಿಸಿದ ವಿಷಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ತಮ್ಮ ಕುಂದು ಕೊರತೆ ಕುರಿತು ವಿವರಗಳನ್ನು ನೊಂದಾಯಿಸಿಕೊಂಡು, ನೋಂದಣಿ ಸಂಖ್ಯೆಯನ್ನು ಪಡೆಯಬೇಕು.

ನೋಂದಣಿ ಮಾಡಿಸುವ ಫಲಾನುಭವಿಗಳು ತಮ್ಮ ಕುಂದು ಕೊರತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8317350584, ದೂರವಾಣಿ ಸಂಖ್ಯೆ 0831-2402821 ಮತ್ತು ಇಮೇಲ್ ಮೂಲಕ ಅಪ್‍ಲೋಡ್ ಮಾಡಬಹುದು.

ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಸಂಬಂಧಿಸಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರುಗಳು ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆಯೆಂದು ಎಮ್‍ಎಲ್‍ಐಆರ್‍ಸಿ ಅಭಿಲೇಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande