ಗದಗ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆ, ಅಂಚೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಸಂಯುಕ್ತಾಶ್ರಯದಲ್ಲಿಂದು ಗದಗ ತಾಲೂಕಿನ ಪೇಟೆ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಶ್ರೀಮತಿ ಶೈಲಜಾ ವಿನಾಯಕ ಮಾನ್ವಿ ಓಣಿಯ ಹಿರಿಯರು ಉದ್ಘಾಟಿಸಿದರು. ಮ ಮ ಅ ಇ ನಿರೂಪಣಾಧಿಕಾರಿಗಳು ಶ್ರೀಮತಿ ರಾಧಾ ಜಿ ಮಣ್ಣೂರ ಇವರು ಮಾತನಾಡಿ ಪೋಷಣ ಮಾಸಾಚರಣೆ 2025ರ ಮುಖ್ಯ ವಿಷಯಗಳಾದ ಬೊಜ್ಜುತನ ನಿವಾರಣೆ, ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು, ಪೋಷಣ ಭಿ ಪಢಾಯಿ ಭಿ, ಶಿಶು & ಚಿಕ್ಕ ಮಕ್ಕಳ ಆಹಾರ ಅಭ್ಯಾಸಗಳು, ಪುರುಷರ ಸಹಬಾಗಿತ್ವದ ಕುರಿತಾದ ಮಾಹಿತಿಗಳನ್ನು ನೀಡಿದರು. ಶ್ರೀಮತಿ ಮೆಹರೋಶ ಮುಲ್ಲಾ ವೈಧ್ಯಾಧಿಕಾರಿಗಳು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು, ಶ್ರೀ ಶಿವರಾಜ ಎ. ಕೆ. ಕಾರ್ಯ ನಿರ್ವಾಹಕರು ಪ್ರಧಾನ ಅಂಚೆ ಕಛೇರಿ ಗದಗ ಇವರು ಅಂಚೆ ಕಛೇರಿಯಲ್ಲಿ 0 ರಿಂದ 6 ವರ್ಷದ ಮಕ್ಕಳಿಗೆ ಉಚಿತವಾಗಿ ಬಾಲ ಆಧಾರ ಕಾರ್ಡ ಮಾಡಿಕೊಡುತ್ತಿರುವ ಮಾಹಿತಿಯನ್ನು ನೀಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪದ್ಮಾವತಿ ಜಿ. ಇವರು ಮಾತನಾಡಿ ಪೌಷ್ಠಿಕ ಆಹಾರವನ್ನು ಮಕ್ಕಳು, ಗರ್ಭಿಣಿ, ಬಾಣಂತಿಯರು ಸರಿಯಾಗಿ ಸೇವಿಸಬೇಕು ಹಾಗೂ ಅದರ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದರು. ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಇದರಿಂದ ರೋಗ ರುಜಿನೆಗಳನ್ನು ತಡೆಗಟ್ಟಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಸರಿಯಾದ ಪೋಷಣೆ ಆರೋಗ್ಯಕರ ಜೀವನದ ಕುರಿತು ತಿಳಿ ಹೇಳಿದರು. ನಂತರ ಲಿಂಗತ್ವ ಅಲ್ಪ ಸಂಖ್ಯಾತರ ಹಾಗೂ ದೇವದಾಸಿಯರ ಮರುಸಮೀಕ್ಷೆ ಕುರಿತಾದ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಶ್ರೀಮತಿ ಎಚ್.ಎಸ್ ಜೋಗೇರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗದಗ, ಕು. ಸಂಗೀತಾ ಹೂಗಾರ ಪೋಷಣ ಜಿಲ್ಲಾ ಸಂಯೋಜಕರು, ಕು. ಪವನ ಕಾಟೀಗರ ಪೋಷಣ ಜಿಲ್ಲಾ ಕಾರ್ಯಕ್ರಮ ಸಹಾಯಕರು, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಗದಗ 2 ವಲಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿಯರು, ತಾಯಂದಿರು, ಮುದ್ದು ಮಕ್ಕಳು ಭಾಗವಹಿಸಿದ್ದರು.
ಶ್ರೀಮತಿ ಸುಜಾತಾ ಹಾವನೂರ ಮೇಲ್ವಿಚಾರಕಿ, ಗದಗ 2 ವಲಯ ಇವರು ಎಲ್ಲರನ್ನು ಸ್ವಾಗತಿಸುವುದರ ಮೂಲಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪತ್ತಾರ ಅಂಗನವಾಡಿ ಕಾರ್ಯಕರ್ತೆ ಪ್ರಾರ್ಥಿಸಿದರು. ಶ್ರೀಮತಿ ಸುಜಾತಾ ಹಾವನೂರ ವಂದಿಸಿದರು.
ಹಮ್ಮಿಕೊಂಡ ಕಾರ್ಯಕ್ರಮಗಳು : ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆ. ಮಕ್ಕಳಿಂದ ಹಣ್ಣುಗಳ ಆರೋಗ್ಯರ ಗುಣಗಳ ಕುರಿತಾದ ಚಟುವಟಿಕೆ. ಮಕ್ಕಳಿಂದ ಸಂಸೃತಿಕ ಚಟುವಟಿಕೆಗಳು. ಸೀಮಂತ ಕಾರ್ಯಕ್ರಮ, ಅನ್ನ ಪ್ರಾಶನ ಕಾರ್ಯಕ್ರಮ.
ಹಿಂದೂಸ್ತಾನ್ ಸಮಾಚಾರ್ / lalita MP