ಶಾಸಕರ ವಾಹನಗಳಿಗೆ ಹಾಕಲು ಪೆಟ್ರೋಲ್ ಇಲ್ಲ : ಸಂಸದ ಜಿಗಜಿಣಗಿ
ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶಾಸಕರು ಜನರ ಸಮಸ್ಯೆಗಳನ್ನು ಆಲಿಸಲು ಅವರ ಬಳಿ ಹೋಗಲು ಕಾರಿಗೆ ಪೆಟ್ರೋಲ್ ಹಾಕಲು ಹಣ ಇಲ. ಆದರೂ ಹೋಗಲು ಸರಿಯಾದ ರಸ್ತೆ ಇಲ್ಲ. ಇಷ್ಟಾದರೂ ಹೋದರೂ ಪರಿಹಾರಕ್ಕೆ ನೀಡಲು ಹಣ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಸರ್ಕಾರದ ವಿರೋಧ ವಾಗ್ದಾಳಿ ನಡೆಸಿದರು. ನಗರ
ಎಂಪಿ


ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಾಸಕರು ಜನರ ಸಮಸ್ಯೆಗಳನ್ನು ಆಲಿಸಲು ಅವರ ಬಳಿ ಹೋಗಲು ಕಾರಿಗೆ ಪೆಟ್ರೋಲ್ ಹಾಕಲು ಹಣ ಇಲ. ಆದರೂ ಹೋಗಲು ಸರಿಯಾದ ರಸ್ತೆ ಇಲ್ಲ. ಇಷ್ಟಾದರೂ ಹೋದರೂ ಪರಿಹಾರಕ್ಕೆ ನೀಡಲು ಹಣ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಸರ್ಕಾರದ ವಿರೋಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವೂ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂದು ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ. ಬೆಳೆ ಅಷ್ಟೇ ಅಲ್ಲ ಮನೆ ನೀರು ಹೋಗಿ ಸಂಸಾರ ಹಾಳಾಗಿದೆ. ಆದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದರು.

ಹಲವಾರು ರೈತರು ನನ್ನ ಮನೆಗೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ರೈತ ಸಮಸ್ಯೆ ಬಗ್ಗೆ ಮಾತನಾಡಲು ಒತ್ತಾಯ ಮಾಡುತ್ತಿದ್ದಾರೆ. ನಾವು ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದ್ರ ಇಲ್ಲಿವರಿಗೂ ಸರ್ಕಾರವು ಕೆ.ಡಿ.ಪಿ ಸಭೆ ಕರೆದಿಲ್ಲ. ಕೆ.ಡಿ.ಪಿ ಸಭೆಯಲ್ಲಿ ಈ ಬಗ್ಗೆ ಮಾತನಾಡಬಹುದು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವೂ ಜನರ ಜೀವನದ ಜೊತೆ ಆಟ ಆಡುತ್ತಿದೆ ಎಂದು ಆರೋಪಿಸಿದರು.

ಇಂದು ಶಾಸಕರು ಸಂಚಾರ ಮಾಡಿ ರೈತರ ಸಮಸ್ಯೆ ಕೇಳಲು ಹೋಗಬೇಕಾದರೆ ಅವರ ಗಾಡಿಗೆ ಹಾಕಲು ಪೆಟ್ರೋಲ್ ಇಲ್ಲ.‌ ಇಂದು ಸರ್ಕಾರದ ವಾಹನಕ್ಕೆ ಪೆಟ್ರೋಲ್ ಹಾಕಲು ಹಣ ಇಲ್ಲದ ಕೆಟ್ಟ ಪರಿಸ್ಥಿತಿ ಬಂದಿದೆ. ಹೋಗಿ ಅವರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ದೂರಿದರು.

ಜಾತಿ ಸಮೀಕ್ಷೆ ಹೇಯ ಕೃತ್ಯ : ರಾಜ್ಯ ಸರ್ಕಾರ ನಿಜವಾಗಿ ಜನರ ಮೇಲೆ ಕಾಳಜಿ ಇದ್ದರೆ, ಜಾತಿ ಸಮೀಕ್ಷೆ ಕೈ ಬಿಟ್ಟು, ರೈತರ ಸಮಸ್ಯೆಗಳ, ಜನರ ಆರ್ಥಿಕ ವ್ಯವಸ್ಥೆ ಬಗ್ಗೆ ಸಮೀಕ್ಷೆ ಮಾಡಬೇಕಿತ್ತು. ರಾಜ್ಯ ಸರ್ಕಾರವು ಜಾತಿ ಸಮೀಕ್ಷೆ ಮಾಡಲು ಮುಂದಾಗಿ ನಗೆಪಾಟಿಯಾಗಿದೆ. ಈ ಜಾತಿ ಸಮೀಕ್ಷೆ ಮಾಡುತ್ತಿರುವುದು ಹೇಯ ಕೃತ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರನಲ್ಲಿ ರಸ್ತೆ ಅಷ್ಟೇ ಕೆಟ್ಟಿಲ್ಲ. ಇಂದು ರಾಜ್ಯದಲ್ಲಿ ಎಲ್ಲವೂ ರಸ್ತೆ ಕೆಟ್ಟಿವೆ. ಇದರ ಬಗ್ಗೆ ಕೇಳಿದರೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಬೇಜವಾಬ್ದಾರಿ ಉತ್ತರ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಪಿಪಿ.....ಪಾಪಿಪಿ‌ವೂ ಬೇಡ : ಜಿಲ್ಲೆಯಲ್ಲಿ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆ ಅವಶ್ಯಕತೆ ಇದೆ. ಪಿಪಿಪಿ, ಪಾಪಿಪಿ ಯಾವುದೇ ಬೇಡ, ಸರ್ಕಾರದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ ಮಾಡುತ್ತೇನೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೂ ಭೇಟಿಯಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ ಮಾಡಿದ್ದೇನೆ ಎಂದರು.

ಈ ವೈದ್ಯಕೀಯ ಕಾಲೇಜು ಸ್ಥಾಪನೆ ಈ ಹಿಂದೆ ಹರ್ಷವರ್ಧನನ ಪತ್ರ ಬರೆದಿದೆ. ಪಿಪಿಪಿ ಮಾಡಲು ಕೇಂದ್ರದ ಮಾರ್ಗದರ್ಶನ, ಮಾರ್ಗಸೂಚಿವು ಇಲ್ಲ. ಇದು ಸುಳ್ಳ ಹೇಳುತ್ತಿದ್ದಾರೆ‌. ಜಿಲ್ಲೆಯ ಹಲವಾರು ಜನರು ಪಿಪಿಪಿ ಸ್ಥಾಪನೆಗೆ ವಿರೋಧ ಮಾಡುತ್ತಿದ್ದಾರೆ. ಅದಕ್ಕಾಗಿ ಜನರು ಹೋರಾಟ ನಡೆಸಿದ್ದಾರೆ. ಅದಕ್ಕೆ ಬೆಂಬಲ ಇದೆ ಎಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ. ಅರುಣ ಶಾಹಪುರ, ಮುಖಂಡ ಭೀಮಾಶಂಕರ ದನ್ನೂರ, ವಿಜಯ ಜೋಶಿ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande