ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಆಹ್ವಾನ
ಗದಗ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26 ನೇ ಸಾಲಿಗೆ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಭೌದ್ಧರು, ಸಿಖ್ಖರು, ಫಾರ್ಸಿಗಳ ಸಮುದಾಯದವರಿಗೆ ರಾಜ್ಯದಲ್ಲಿಕನಿಷ್ಠ 10 ವರ್ಷ ವಾಸವಾಗಿರುವ. 18 ರಿಂದ 55 ವರ್ಷ ವಯೋಮಿತಿವುಳ್ಳ ಆಸಕ್ತರಿಂದ. ಈ ಕೆಳಗಿ
ಪೋಟೋ


ಗದಗ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26 ನೇ ಸಾಲಿಗೆ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಭೌದ್ಧರು, ಸಿಖ್ಖರು, ಫಾರ್ಸಿಗಳ ಸಮುದಾಯದವರಿಗೆ ರಾಜ್ಯದಲ್ಲಿಕನಿಷ್ಠ 10 ವರ್ಷ ವಾಸವಾಗಿರುವ. 18 ರಿಂದ 55 ವರ್ಷ ವಯೋಮಿತಿವುಳ್ಳ ಆಸಕ್ತರಿಂದ. ಈ ಕೆಳಗಿನ ಸಾಲದ ಯೋಜನೆಗಳಿಗೆ ಸಾಲ ಸೌಲಭ್ಯಒದಗಿಸಲು ನಿಗಮದ ಅಂತರಜಾಲ ರವರಗೆ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರ ಕುಟುಂಬದ ಸದಸ್ಯರು ಯೋಜನೆಗಳಿಗೆ ಅರ್ಹರಾಗಿರುವುದಿಲ್ಲ.

ಶ್ರಮಶಕ್ತಿ ಸಾಲ ಯೋಜನೆ:- ಈ ಯೋಜನೆಯಡಿಯಲ್ಲಿಅಲ್ಪಸಂಖ್ಯಾತ ವರ್ಗದಕುಲಕಸಬುದಾರರು, ತಮ್ಮ ಸಂಪ್ರದಾಯಕ ಮಾರುಕಟ್ಟೆ ಹಾಗೂ ವೃತ್ತಿಕೌಶಲ್ಯ ತೆಗೆಅನುಗುಣವಾಗಿ ಅಭಿವೃಧಿಗೊಳಿಸುವ ಸಲುವಾಗಿ ನಿಗಮದಿಂದಶೇ 4ರ ಬಡ್ಡಿದರದಲ್ಲಿರೂ 50,000/- ರವರಗೆ ಸಾಲ ಸೌಲಭ್ಯವನ್ನುಕಲ್ಪಿಸಲಾಗುತ್ತದೆ.

ಈ ಯೋಜನೆಯಲ್ಲಿ ಶೇ 50ರಷ್ಟು ಸಾಲವನ್ನು 36 ತಿಂಗಳನಲ್ಲಿ ಫಲಾನುಭವಿಯು ಮುರುಪಾವತಿ ಮಾಡಿದಲ್ಲಿ, ಉಳಿದ ಶೇ 50ರಷ್ಟು ಹಣವನ್ನು ‘ಬ್ಯಾಕ್‌ಎಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಪರರಾದಲ್ಲಿ ಶೇ 50ರಷ್ಟು ಬ್ಯಾಕ್‌ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ವೃತ್ತೀ ಪ್ರೋತ್ಸಾಹ ಕರ್ನಾಟಕಅಲ್ಪಸಂಖ್ಯಾತರ ಅಬಿವೃದ್ಧಿ ನಿಗಮದಿಂದ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿಒಟ್ಟುರೂ.1,00,000/- ಸಾಲದೊಂದಿಗೆ ಬದಲಿಯಿಸಿದ ಇದರಲ್ಲಿ50% ಸಾಲ ಮತ್ತು 50% ವಿವಿಧಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ:- ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ/ಪಡೆದಟ್ಯಾಕ್ಸಿ/ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದಶೇ 50ರಷ್ಟು ಅಥವಾಗರಿಷ್ಟರೂ. 3,00,000/- ರವರಗೆ ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು.

ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ಯೋಜನೆ, ಈ ಯೋಜನೆಯು ವಿದೇಶದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಬಯಸುವಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುವುದು.

ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ:- ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆಅಗತ್ತಯವಿರುವದುಡಿಮೆ ಬಂಡವಾಳ ಮತ್ತು ಮೂಲಭೂತ ಸೌಕರ್ಯವನ್ನುಒದಗಿಸಲು ನಿಗಮದಿಂದರೂ.2.00 ಲಕ್ಷದವರಗೆ ಸಾಲ ಸಹಾಯಧನಒದಗಿಸಲಾಗುವುದು. ಇದರಲ್ಲಿಶೇ.50 ಸಹಾಯಧನವಾಗಿರುತ್ತದೆ.

ನೇರಸಾಲ ಯೋಜನೆ:ಈ ಯೋಜನೆಯಡಿಯಲ್ಲಿ ವ್ಯಾಪರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನುಒದಗಿಸಲಾಗುವುದು. ವಯಸ್ಯು 18 ರಿಂದ 55 ವರ್ಷದೊಳಗಿರಬೇಕು.ಕುಟುಂಬದ ವಾರ್ಷಿಕಆದಾಯರೂ.8.00 ಲಕ್ಷಗಳಿಗಿಂತ ಕಡಿಮೆಇರುವಅರ್ಜಿದಾರರಿಗೆ ರೂ.20.00 ಲಕ್ಷದವರಗೆ ಶೇ4% ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು.ಕುಟುಂಬದ ವಾರ್ಷಿಕ ಆದಾಯ ರೂ.8.00 ರಿಂದ 15.00 ಲಕ್ಷವರೆಗೆ ಇರುವ ಅರ್ಜಿದಾರರಿಗೆ ರೂ.20.00 ಲಕ್ಷವರೆಗೆ ಶೇ 6 ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಸಾಂತ್ವನ ಯೋಜನೆ: 2025-26 ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದರಾಜ್ಯದಲ್ಲಿನ ವಿಶೇಷ ಹಾಗೂ ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಟ 5.00 ಲಕ್ಷರೂರವರಗೆ ಘಟಕ ವೆಚ್ಚಕ್ಕೆ ಶೇ50 ರಷ್ಟು ಸಹಾಯಧನ ಮತ್ತುಶೇ.3ರ ಬಡ್ಡಿದರದಲ್ಲಿ ಶೇ50 ರಷ್ಟು ಸಾಲವನ್ನು ನೀಡಲಾಗುವುದು. ಹಾಗೂ ರಾಜ್ಯದಲ್ಲಿ ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಟ ರೂ.2.00 ಲಕ್ಷ ನಷ್ಟವಾಗಿದ್ದರೆ ಸಾಲ ಸೌಲಭ್ಯಒದಗಿಸಲಾಗುವುದು.

ಜಿಲ್ಲೆಯ ಅರ್ಹ ಅಲ್ಪಸಂಖ್ಯಾತರ ಜನರು ಮೇಲ್ಕಂಡ 2025-26 ನೇ ಸಾಲಿನ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕಸಲ್ಲಿಸಿದ ಅರ್ಜಿ ಹಾಗೂ ದಾಖಲಾತಿಗಳನ್ನು ನಕಲು ಪ್ರತಿಯನ್ನು ಜಿಲ್ಲಾ ಕಛೇರಿಗೆ ಸಲ್ಲಿಸಲುಅಗತ್ಯವಿರುವುದಿಲ್ಲ. ಹಾಗೂ ಜಿಲ್ಲಾಕಛೇರಿಯಲ್ಲಿಯಾವುದೇ ಅರ್ಜಿಗಳ ಜೊತೆ ದಾಖಲಾತಿಗಳನ್ನು ಸ್ವೀಕರಿಸುವುದಿಲ್ಲ. ಹಾಗೂ ನಿಗಮದಅಂತರಜಾಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08372-295147 ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande