ಸಿರುಗುಪ್ಪ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪದ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ 70 ಫಲಾನುಭವಿಗಳಿಗೆ ರೂ.70 ಲಕ್ಷ ಆರ್ಥಿಕ ಸಹಾಯಧನ ಹಾಗೂ ರಾಷ್ಟ್ರೀಯ ಕೇಂದ್ರ ಪುರಸ್ಕೃತ ತಾಳೆ ಎಣ್ಣೆ ಬೇಸಾಯ ಯೋಜನೆಯಡಿ ರೂ.30 ಲಕ್ಷಗಳ ಆರ್ಥಿಕ ಗುರಿಗೆ 120 ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸಹಾಯಧನ ಮತ್ತು ರೂ.20 ಲಕ್ಷ ಆರ್ಥಿಕ ಗುರಿಗೆ 80 ಪರಿಶಿಷ್ಟ ಪಂಗಡ ವರ್ಗದ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತದೆ.
ಸಿರುಗುಪ್ಪ ತಾಲ್ಲೂಕಿನ ಕೊಳವೆ ಬಾವಿ ಹಾಗೂ ನೀರಾವರಿ ಸೌಲಭ್ಯವಿರುವ ರೈತರು ಅಗತ್ಯ ದಾಖಲೇಗಳೊಂದಿಗೆ ಯೋಜನೆಯ ಸೌಲಭ್ಯ ಪಡೆಯಬಹುದು.
ಬೇಕಾದ ದಾಖಲೆಗಳು : ಪ್ರಸ್ತಕ ಸಾಲಿನ ಪಹಣಿ, ಬ್ಯಾಂಕ್ ಖಾತೆಯ ಪುಸ್ತಕ, ಆಧಾರ್ ಕಾರ್ಡ್. ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಮತ್ತು ಸಿರುಗುಪ್ಪ ಹಿರಿಯ ತೋಟಗಾರಿಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್