ಸಿಂಧನೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಿಂಧನೂರು ತಾಲೂಕಾಡಳಿತ, ತಾಲೂಕ ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರಿನಲ್ಲಿ ಆರೋಗ್ಯ ದಸರಾ ಅಂಗವಾಗಿ ಸೆ.28ರ ಬೆಳಿಗ್ಗೆ 6.30ಕ್ಕೆ ನಮ್ಮ ನಡೆ-ಆರೋಗ್ಯದ ಕಡೆ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಜಾಥಾವು ಸಿಂಧನೂರಿನ ತಹಸೀಲ್ ಕಾರ್ಯಾಲಯದಿಂದ-ಹಳೆಬಜಾರ್-ಚೆನ್ನಮ್ಮ ಸರ್ಕಲ್-ದಸರಾ ಉತ್ಸವ ಮೈದಾನದವರೆಗೆ ನಡೆಯಲಿದೆ.
ಆರೋಗ್ಯ ದಸರಾ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9.30ಕ್ಕೆ ನಗರದ ಆರ್.ಜಿ.ಎಂ.ಶಾಲಾ ಮೈದಾನದಲ್ಲಿ ಆರೋಗ್ಯ ಇಲಾಖೆ, ರಿಮ್ಸ್, ಐ.ಎಂ.ಎ. ಸಿಂಧನೂರು ಮತ್ತು ಅನ್ನದಾನೇಶ್ವರ ಚಾರಿಟೇಬಲ್ ಟ್ರಸ್ಟ್ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 05 ಗಂಟೆಗೆ ದಸರಾ ಉತ್ಸವದ ಆವರಣದಲ್ಲಿ ಸಿರಿ-ಧಾನ್ಯಗಳ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಸಂಜೆ 6 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಖಾದರ್ ವಲಿ ಅವರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಸಿಂಧನೂರು ದಸರಾ ಉತ್ಸವ ಸಮಿತಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್