ರಾಯಚೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2025-26ನೇ ಸಾಲಿಗೆ ನಾನಾ ಯೋಜನೆಗಳಡಿ ಸೇವಾ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉನ್ನತ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ನಿರಾಮಯ ಯೋಜನೆ ಹಾಗೂ ವಿಕಲಚೇತನರ ವಿವಾಹ ಪ್ರೋತ್ಸಾಹ ಧನಕ್ಕೆ ಅಕ್ಟೋಬರ್ 23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾಲಾವಕಾಶ ನೀಡಲಾಗುವುದಿಲ್ಲ. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಾವಿನ ಕೆರೆ ರಸ್ತೆ, ಆಜಾದ ನಗರ, ರಾಯಚೂರು ಜಿಲ್ಲಾ ಕಚೇರಿಗೆ ಕಚೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಯಚೂರು ತಾಲೂಕು ಪಂಚಾಯತ್ ಎಂ.ಆರ್.ಡಬ್ಲೂö್ಯ ಅಮರೇಶ ಯಾದವ್ ಮೊಬೈಲ್ ಸಂಖ್ಯೆ:9972237508, ಮಾನವಿ-ಸಿರವಾರ ತಾಲೂಕು ಪಂಚಾಯತ್ ಎಂ.ಆರ್.ಡಬ್ಲೂö್ಯ ರಾಘವೇಂದ್ರ ಮೊಬೈಲ್ ಸಂಖ್ಯೆ:9740203769, ದೇವದುರ್ಗ ತಾಲೂಕು ಪಂಚಾಯತ್ ಎಂ.ಆರ್.ಡಬ್ಲೂö್ಯ ಲೋಕಪ್ಪ ನೂರು ನಾಯ್ಕೆ ಮೊಬೈಲ್ ಸಂಖ್ಯೆ:9945207693, ಸಿಂಧನೂರು ತಾಲೂಕು ಪಂಚಾಯತ್ ಎಂ.ಆರ್.ಡಬ್ಲೂö್ಯ ಬಸವರಾಜ ಸಾಸಲಮರಿ ಮೊಬೈಲ್ ಸಂಖ್ಯೆ:9900298217, ಲಿಂಗಸ್ಗೂರು-ಮಸ್ಕಿ ತಾಲೂಕು ಪಂಚಾಯತ್ ಎಂ.ಆರ್.ಡಬ್ಲೂö್ಯ ನಾಗರಾಜ ಮೊಬೈಲ್ ಸಂಖ್ಯೆ:9901668380ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್