ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿನ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಅಥಣಿ ರಸ್ತೆಯನ್ನು ತಡೆ ಮಾಡಿ ಗುಂಡಿಗಳಲ್ಲಿ ಸಸಿಗಳ
ಬಿಜೆಪಿ


ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿನ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಅಥಣಿ ರಸ್ತೆಯನ್ನು ತಡೆ ಮಾಡಿ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಅಥಣಿ ರಸ್ತೆಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ - ಜೀವಕ್ಕೆ ಸಂಚಾರ', `ಗುಂಡಿ ಮುಚ್ಚದೇ ರಾಜ್ಯದ ಜನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ', `ಗುಂಡಿಗಳ ಜನಕ ಡಿ.ಕೆ. ಶಿವಕುಮಾರ' ಎಂಬಿತ್ಯಾದಿ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ರಾಜ್ಯ ಸರ್ಕಾರ ಒಂದೇ ಒಂದು ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ, ರಸ್ತೆಗಳ ಅವ್ಯವಸ್ಥೆ ಖಂಡಿಸಿ ಅನೇಕ ಉದ್ಯಮಗಳು ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಹೇಳಿದರೆ ನಮ್ಮ ಉಪ ಮುಖ್ಯಮಂತ್ರಿಗಳು ಇದನ್ನು ಬ್ಲಾಕ್ ಮೇಲ್ ಎಂದು ಕರೆದರು, ರಸ್ತೆ ನಿರ್ಮಿಸಿಕೊಡಿ ಎಂದು ಹೇಳುವುದು ಬ್ಲಾಕ್ ಮೇಲ್ ಎಂದಾದರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಈ ನೀತಿಯಿಂದಾಗಿಯೇ ಅನೇಕ ಕಂಪನಿಗಳು ನಮ್ಮ ರಾಜ್ಯ ಬಿಟ್ಟು ಹೋಗುತ್ತಿವೆ, ಇದರಿಂದ ನಮ್ಮ ಉದ್ಯೋಗಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ, ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ಮಾಡಬೇಕಾದ ಸರ್ಕಾರ ಆ ವಿಷಯದಲ್ಲಿಯೂ ದರ್ಪ ತೋರಿ ಬಿಟ್ಟು ಹೋಗುವುದಾದರೆ ಬಿಟ್ಟು ಹೋಗಿ ಎಂದು ಉದ್ಯಮ ಸಂಸ್ಥೆಗಳಿಗೆ ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ, ಇದೊಂದು ನಿರ್ಲಜ್ಜ ಸರ್ಕಾರ, ರಸ್ತೆ ಕೇಳಿದರೆ ಬ್ಲಾಕ್ ಮೇಲ್ ಎಂದು ಹೇಳುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದಲ್ಲಂತೂ ರಸ್ತೆಗಳು ಹಾಳಾಗಿ ಹೋಗಿವೆ, ಗುಂಡಿಗಳನು ಮಚ್ಚುವ ಕನಿಷ್ಠ ಕಾರ್ಯವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ, ಈ ಎಲ್ಲ ರಸ್ತೆಗಳು ನಿತ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕೇವಲ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿಗೆ ಒಂದೇ ಒಂದು ರೂ. ಅನುದಾನವನ್ನು ಈ ರಾಜ್ಯ ಸರ್ಕಾರ ನೀಡಿಲ್ಲ, ಕರ್ನಾಟಕದ ರಸ್ತೆಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸರ್ವನಾಶವಾಗಿವೆ, ರಾಜ್ಯದ ಘನತೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. ಕೂಡಲೇ ರಾಜ್ಯ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದರು. ಪಾಲಿಕೆ ಸದಸ್ಯ ರಾಹುಲ್ ಜಾಧವ ಮಾತನಾಡಿದರು.

ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ್ ಕಾರಜೋಳ, ಗೋಪಾಲ್ ಘಟಕಾಂಬಳೆ, ಚಿದಾನಂದ್ ಛಲವಾದಿ, ಮಳುಗೌಡ ಪಾಟೀಲ, ನಗರ ಬಿಜೆಪಿ ಅಧ್ಯಕ್ಷ ಸಂದೀಪ್ ಪಾಟೀಲ್ ಮಲ್ಲಿಕಾರ್ಜುನ ಜೋಗುರ, ಎಸ್.ಎ. ಪಾಟೀಲ, ಡಾ.ಸುರೇಶ ಬಿರಾದಾರ, ಉಮೇಶ್ ಕೊಳಕುರ, ಬಸವರಾಜ್ ಭೈಚಭಾಳ, ರಾಜೇಶ ತಾವಸೆ, ಭೀಮಾಶಂಕರ್ ಹದನೂರ, ರಾಹುಲ್ ಜಾಧವ, ಭೀಮಸಿಂಗ್ ರಾಠೋಡ, ಬಾಲರಾಜ್ ರೆಡ್ಡಿ, ರಾಘವೇಂದ್ರ ಕಾಪಸೆ, ಸಚಿನ್ ಬೊಂಬ್ಳೆ, ಶ್ರೀಕಾಂತ್ ಶಿಂಧೆ, ರವಿಕಾಂತ್ ಬಗಲಿ, ರಾಜು ಬಿರಾದಾರ,, ಪಾಪುಸಿಂಗ್ ರಾಜಪೂತ, ಚಿನ್ನು ಚಿನಗುಂಡಿ, ರಾಮಚಂದ್ರ ಚವ್ಹಾಣ, ಬಸವರಾಜ್ ಹಳ್ಳಿ, ಆನಂದ್ ಮುಚ್ಚಂಡಿ, ಅಪ್ಪು ಕುಂಬಾರ, ಪ್ರಮೋದ್ ಬಡಿಗೇರ, ಸಂತೋಷ ನಿಂಬರಗಿ, ಜಗದೀಶ್ ಮುಚ್ಚಂಡಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ವಿಜಯ ಜೋಶಿ, ರವಿ ಬಿರಾದಾರ, ಭೀಮು ಸಾರವಾಡ, ಸ್ವಪ್ನಾ ಕಣಮುಚನಾಳ, ಮಲ್ಲಮ್ಮ ಜೋಗೂರ, ಗೀತಾ ಚೌಧರಿ, ಸುಷ್ಮಿತಾ ವಾಡಕರ, ರಾಜೇಶ್ವರಿ ಅವಟಿ, ಸಂಪತ್ ಕೋವಳ್ಳಿ, ಶಿವಾನಂದ ಮಖಣಾಪೂರ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande