ಅಮರದೀಪ ರಚಿತ `ಮರಳಿ ಮನ ಸಾಗಿದೆ' ಕೃತಿ 28ಕ್ಕೆ ಬಿಡುಗಡೆ
ಕೊಪ್ಪಳ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಆಗಿರುವ ಲೇಖಕ ಅಪರದೀಪ. ಪಿ.ಎಸ್ ಅವರ ಮೊದಲ ಕೃತಿ `ಮರಳಿ ಮನ ಸಾಗಿದೆ'' ಪುಸ್ತಕದ ಲೋಕಾರ್ಪಣೆ ಸೆ.೨೮ರಂದು ಬೆಳಗ್ಗೆ ೧೦-೩೦ಕ್ಕೆ ನಗರದ ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ
ಅಮರದೀಪ ರಚಿತ `ಮರಳಿ ಮನ ಸಾಗಿದೆ' ಕೃತಿ 28ಕ್ಕೆ ಬಿಡುಗಡೆ


ಕೊಪ್ಪಳ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಆಗಿರುವ ಲೇಖಕ ಅಪರದೀಪ. ಪಿ.ಎಸ್ ಅವರ ಮೊದಲ ಕೃತಿ `ಮರಳಿ ಮನ ಸಾಗಿದೆ' ಪುಸ್ತಕದ ಲೋಕಾರ್ಪಣೆ ಸೆ.೨೮ರಂದು ಬೆಳಗ್ಗೆ ೧೦-೩೦ಕ್ಕೆ ನಗರದ ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.

ಪತ್ರಕರ್ತ ನಟರಾಜು ಎಸ್.ಎಂ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಜಿಎಸ್‌ಟಿ ಆಯುಕ್ತ ಕೊಟ್ರಸ್ವಾಮಿ ಎಂ. ಪುಸ್ತಕ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಈಶ್ವರ ಹತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ್ ಅವರು ಪ್ರಾಸ್ಥವಿಕವಾಗಿ ಮಾತನಾಡಲಿದ್ದಾರೆ. ಪ್ರಬಂಧಕಾರ ಈರಪ್ಪ ಕಂಬಳಿ ಪುಸ್ತಕ ಕುರಿತು ಮಾತನಾಡುವರು.

ಜಿಲ್ಲಾ ಪಂಚಾಯಿತಿ ಮುಖ್ಯ ಹಣಕಾಸು ಅಧಿಕಾರಿ ಅಮೀನಸಾಬ್ ಅತ್ತಾರ, ರಾಜ್ಯ ಸಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ಪಾಲ್ಗೊಳ್ಳುವರು. ಲೇಖಕ ಪಿ.ಎಸ್.ಅಮರದೀಪ ಉಪಸ್ಥಿತಿ ಇರುವರು. ಕಡ್ಲಿ ಸುವರ್ಣ ಶಿವರಾಜ, ಕಡ್ಲಿ ಹೇಮಲತಾ ಗುರುಬಸವರಾಜ ಅವರಿಗೆ ಇದೇ ವೇಳೆ ಸನ್ಮಾನಿಸಲಾಗುತ್ತಿದೆ. ಶ್ರೀ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್(ರಿ)ಬೆಣಕಲ್ ಪ್ರಕಾಶನದಿಂದ ಪುಸ್ತಕ ಪ್ರಕಟಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande