ಗದಗ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾತಿ ಸಮೀಕ್ಷೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಶಿಕ್ಷಕರು ಗಣತಿಯ ಆ್ಯಪ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಗದಗ ತಹಶಿಲ್ದಾರ ಕಚೇರಿಗೆ ಆಗಮಿಸಿದ ಗಣತಿದಾರರು, ಅಧಿಕಾರಿಗಳ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಮನೆಯಲ್ಲಿ 10 ಜನ ಇದ್ದರೆ ಪ್ರತಿಯೊಬ್ಬರಿಗೂ 40 ಪ್ರಶ್ನೆಗಳಂತೆ ಹಲವು ವಿವರಗಳನ್ನು ಸಂಗ್ರಹಿಸಬೇಕಾಗಿದ್ದು, ಜೊತೆಗೆ ಒಂದು ಕುಟುಂಬಕ್ಕೆ 20 ಪ್ರಶ್ನೆ ಹೆಚ್ಚುವರಿಯಾಗಿ ಕೇಳಬೇಕಾಗಿದೆ. ಹೀಗಾಗಿ ಪ್ರತಿಯೊಂದು ಮನೆಯಲ್ಲಿ 1ರಿಂದ 2 ಗಂಟೆಗಳಷ್ಟು ಸಮಯ ಹಿಡಿಯುತ್ತಿದೆ. ಇದರಿಂದ ಸಾರ್ವಜನಿಕರು ಬೇಸರಗೊಂಡು ಬೇಗ ಮುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡರು.
ಮನೆಗಳಿಗೆ ಅಂಟಿಸಿದ ಆರ್ ಆರ್ ನಂಬರು ಮಳೆಗಾಲದಲ್ಲಿ ಅಳಕಿಸಿಕೊಂಡು ಹೋಗಿರುವುದು, ಹರಿದು ಹೋದ ಪರಿಣಾಮ ಮಾಹಿತಿ ಸಂಗ್ರಹಣೆಯಲ್ಲಿ ತೊಂದರೆ ಆಗುತ್ತಿದೆ. ಜೊತೆಗೆ, ಆ್ಯಪ್‌ನಲ್ಲಿನ ಓಟಿಪಿ ತಡವಾಗಿ ಬರುವುದು, ಸರ್ವರ್ ಸಮಸ್ಯೆ ಎದುರಾಗುವುದು ಕಾರ್ಯವಿಧಾನವನ್ನು ಇನ್ನಷ್ಟು ಕಷ್ಟಮಾಡಿದೆ ಎಂದು ಶಿಕ್ಷಕರು ಗೊಂದಲ ಬಿಚ್ಚಿಟ್ಟರು.
ಒಂದು ಕಡೆ ಆ್ಯಪ್ ಸಮಸ್ಯೆ, ಮತ್ತೊಂದೆಡೆ ಸಾರ್ವಜನಿಕರ ಅಸಹಕಾರ, ಈ ಎರಡರ ನಡುವೆಯೂ ಗಣತಿದಾರ ಶಿಕ್ಷಕರು ಪರದಾಡುತ್ತಿರುವ ಸ್ಥಿತಿ ಗದಗ ತಹಶಿಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ತಮ್ಮ ಅಳಲಯ ತೊಡಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / lalita MP