ರಾಯಚೂರು, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯಕ್ಕೆ ಆಯುರ್ವೇದವು ಪೂರಕವಾಗಿದೆ. ಆಯುರ್ವೇದದ ಮೌಲ್ಯಿಕ ಅಂಶಗಳನ್ನು ಎಲ್ಲರೂ ಅರಿತು ಸದುಪಯೋಗ ಪಡಿಸಿಕೊಳ್ಳಬೇಕು ಎ0ಿದು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಸರಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಸೆ.23ರಂದು ನಡೆದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಹಾಗೂ ಧನ್ವಂತರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಶಂಕರಗೌಡ ಅವರು ಮಾತನಾಡಿ, ನಮ್ಮ ಮನಸ್ಸು, ಆತ್ಮ ಮತ್ತು ದೇಹ ಮೂರೂ ಆರೋಗ್ಯವಾಗಿದ್ದಲ್ಲಿ ಮನುಷ್ಯ ಸದಾಕಾಲ ಚೇತನದಿಂದಿರಲು ಸಾಧ್ಯಾಗುತ್ತದೆ ಎಂದರು.
ಇಡೀ ಭರತ ಖಂಡದಲ್ಲಿ ಇಂದಿನ ದಿನ ಉತ್ತರಾರ್ಧ ಗೋಳದಲ್ಲಿ ಸೂರ್ಯನು ದಕ್ಷಿಣಾರ್ಧದಲ್ಲಿ ಚಲಿಸುವುದರಿಂದ 12 ಗಂಟೆ ಹಗಲು ಮತ್ತು 12 ಗಂಟೆ ರಾತ್ರಿ ಸಮತಲವಾಗಿರುತ್ತದೆ. ಆದ್ದರಿಂದ ಈ ದಿನದಂದೇ ನಮ್ಮ ಆಯುಷ್ ಇಲಾಖೆಯಿಂದ ಆಯುರ್ವೇದ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ಮಾತನಾಡಿ, ಸುಮಾರು 9 ವರ್ಷಗಳಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದನ್ನು ಅಂತಾರಾಷ್ಟ್ರೀಯವಾಗಿ ಮತ್ತು ಪ್ರಪಂಚದಾದ್ಯ0ತ ಆಚರಿಸಲು ನಾವೆಲ್ಲ ನಮ್ಮ ಆಯುರ್ವೇದ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಆಯುರ್ವೇದ ವೈದ್ಯರು, ಅಲೋಪತಿ ಮತ್ತು ಹೋಮಿಯೋಪಥಿ ಪ್ರಾಕ್ಟೀಸ್ ಮಾಡದೆ ಚಿಕಿತ್ಸೆ ನೀಡುತ್ತಿರುವುದು ಕಾನೂನು ಬಾಹೀರವಾಗಿದ್ದು, ಅದರಡಿ ಕೆಲ ವೈದ್ಯರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯಶನ್ ಅಧ್ಯಕ್ಷ ಡಾ.ದೇಶಪಾಂಡೆ ಅವರು ಮಾತನಾಡಿ, ಮನುಷ್ಯನು ತನ್ನ ದಿನನಿತ್ಯದ ಜೀವನದಲ್ಲಿ ದೈಹಿಕ ಆರೋಗ್ಯಕ್ಕೆ ಸಂಬAಧಿಸಿದ ಎಲ್ಲ ಅಂಶಗಳನ್ನು ಸರಿಯಾಗಿ ಪಾಲಿಸಿದರೆ ತುಂಬಾ ವರ್ಷಗಳ ಕಾಲ ಬದುಕುಳಿಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಡಾ.ಕಣಕಾಲಕ್ಷ್ಮಿ, ಡಾ.ನವೀನ್ ಹಾಗೂ ಡಾ.ಪೂಜಾ ಅವರು ಧನ್ವಂತರಿ ಮಂತ್ರದ ಪ್ರಾರ್ಥನಾ ಗೀತೆ ಹೇಳಿದರು.
ಈ ವೇಳೆ ಹಿರಿಯ ವೈದ್ಯಾಧಿಕಾರಿಗಳು, ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಡಾ.ಶಂಕರಗೌಡ ಪಾಟೀಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಆಮದರ್ ಷರೀಫ್ ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್