ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ 24 ರಂದು ಬೆಳಿಗ್ಗೆ 10 ಗಂಟೆಗೆ ಬಾಗಲಕೋಟೆ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ವಿವಿಧ ಸಾಂಸ್ಕøತಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯೂಜಿಕಲ್ ಚೇರ್ (60 ರಇಂದ 70 ವರ್ಷ), ಬಿರುಸಿನ ನಡಿಗೆ (60 ರಿಂದ 69), ಬಕೇಟ್‍ನಲ್ಲಿ ಬಾಲ್ ಎಸೆಯುವ ಸ್ಪರ್ಧೆ (60 ರಿಂದ 69, 70 ವರ್ಷ ಹಾಗೂ ಮೇಲ್ಪಟ್ಟ)ಗಳನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಗಾಯನ ಸ್ಪರ್ಧೆ, ಏಕ ಪಾತ್ರ ಅಭಿನಯ ಸ್ಪರ್ಧೆ (60-69, 70 ವರ್ಷ ಹಾಗೂ ಮೇಲ್ಪಟ್ಟವರಿಗೆ) ಗಳು ನಡೆಯಲಿವೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಎಂ.ಆರ್.ಡಬ್ಲೂ ಬಾಗಲಕೋಟೆ (9538714441), ಬಾದಾಮಿ, ಗುಳೇದಗುಡ್ಡ (9945408215), ಹುನಗುಂದ, ಇಲಕಲ್ಲ (8970565869), ಬೀಳಗಿ (7676980002), ಮುಧೋಳ (9008173773), ಜಮಖಂಡಿ (9900417764) ಹಾಗೂ ರಬಕವಿ-ಬನಹಟ್ಟಿ (9739936205)ಗೆ ಸಮಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande