ನಾಡಿನ ಹಿತಕ್ಕಾಗಿ ಶರನ್ನವರಾತ್ರಿ ಆಚರಣೆ : ಕಲ್ಯಾಣ ಶ್ರೀಗಳು
ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ರೈತರ ಹಿತಾಸಕ್ತಿಗಾಗಿ ಪ್ರಾರ್ಥಿಸಿ ಈ ವರ್ಷದ ದಸರಾ ನವರಾತ್ರಿಯನ್ನು ಸೋಮವಾರದಿಂದ ಕಮ್ಮರಚೇಡು ಕಲ್ಯಾಣಶ್ರೀಗಳ ಮಠದಲ್ಲಿ ಏರ್ಪಡಿಸಲಾಗಿದೆ ಎಂದು ಕಲ್ಯಾಣ ಶ್ರೀಗಳು ತಿಳಿಸಿದ್ದಾರೆ. ಸುದ್ದಿಗಾರರಿಗೆ ಈ ಮ
ಬಳ್ಳಾರಿ : ನಾಡಿನ ಹಿತಕ್ಕಾಗಿ ಶರನ್ನವರಾತ್ರಿ ಆಚರಣೆ : ಕಲ್ಯಾಣ ಶ್ರೀಗಳು


ಬಳ್ಳಾರಿ : ನಾಡಿನ ಹಿತಕ್ಕಾಗಿ ಶರನ್ನವರಾತ್ರಿ ಆಚರಣೆ : ಕಲ್ಯಾಣ ಶ್ರೀಗಳು


ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ರೈತರ ಹಿತಾಸಕ್ತಿಗಾಗಿ ಪ್ರಾರ್ಥಿಸಿ ಈ ವರ್ಷದ ದಸರಾ ನವರಾತ್ರಿಯನ್ನು ಸೋಮವಾರದಿಂದ ಕಮ್ಮರಚೇಡು ಕಲ್ಯಾಣಶ್ರೀಗಳ ಮಠದಲ್ಲಿ ಏರ್ಪಡಿಸಲಾಗಿದೆ ಎಂದು ಕಲ್ಯಾಣ ಶ್ರೀಗಳು ತಿಳಿಸಿದ್ದಾರೆ.

ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಶ್ರೀಗಳು, ನಾಡಿನಲ್ಲಿ ಜನರಲ್ಲಿ ಪರಸ್ಪರ ಸೌಹಾರ್ದತೆ, ಶಾಂತಿ, ನೆಮ್ಮದಿ ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಟ್ಟಿನಲ್ಲಿ ಶ್ರೀಮಠವು ಸರ್ವಜನಾಂಗದ ಹಿತಕ್ಕಾಗಿ - ಏಳ್ಗೆಗಾಗಿ ಈ ವರ್ಷದ ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಮಾತಾ ಬಿ. ಮಂಜಮ್ಮ ಜೋಗತಿ ಅವರು ದಸರಾ ಉತ್ಸವವನ್ನು ಸೋಮವಾರ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ.

ಉಜ್ಜಯಿನಿ ಸಿದ್ದಲಿಂಗ ದೇಶಿಕೇಂದ್ರ ಶಿವಾಚಾರ್ಯರು, ಉರವಕೊಂಡದ ಉರಗಾದ್ರಿ ಮಠದ ಚೆನ್ನಬಸವರಾಜೇಂದ್ರ ಶ್ರೀಗಳು, ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ಲು ಮಹಾಂತೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.

ಸೆಪ್ಟಂಬರ್ 26 ರಂದು ಸಂಜೆ ಮುತ್ತೈದೆಯರಿಗೆ ಉಡಿತುಂಬುವಿಕೆ. ಸೆಪ್ಟಂಬರ್ 28 ರಂದು ಬೆಂಗಳೂರಿನ ಜಂಬುನಾಥ ಮಳಿಮಠ ಅವರಿಂದ ಆದ್ಯಾತ್ಮ ಚಿಂತನೆ. ಸೆಪ್ಟಂಬರ್ 30 ರಂದು ದುರ್ಗಾಷ್ಟಮಿ ಪರ್ವ ದಿನದಂದು ಬೆಳಿಗ್ಗೆ ಶ್ರೀಮಠದಲ್ಲಿ 10 ಗಂಟೆಗೆ ಹೋಮ, ಪುರಾಣ ಪ್ರವಚನ ಉಪನ್ಯಾಸಕ ಡಾ. ಯು. ಶ್ರೀನಿವಾಸಮೂರ್ತಿ ಅವರಿಂದ. ಪುರಾಣ ಪಠಣ ಚನ್ನವೀರಯ್ಯ ಸಾರಂಗಮಠ ಸಿಡಿಗಿನಮೊಳೆ, ತಬಲ ಸಾಥ್ ರಾಘವೇಂದ್ರ ಅವರಿಂದ. ಸೆಪ್ಟಂಬರ್ 02ರಂದು ವಿಜಯದಶಮಿ. ಮಠದ ಆವರಣದಲ್ಲಿ ಸಂಜೆ 5.30 ಕ್ಕೆ ಬನ್ನಿ ಮುಡಿಯುವಿಕೆ ನಡೆಯಲಿದೆ ಎಂದು ವಿವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande