ರಾಯಚೂರು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ 70ನೇ ವಾರ್ಷಿಕ ಮಹಾಸಭೆ
ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ನಿಯಮಿತದ ಸಂಘದ 70ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜಯವಂತರಾವ್ ಪತಂಗೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ವೇಳೆ ಜಯವಂತರಾವ್
ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ, ಸಂಸ್ಕರಣ ಸಹಕಾರ ಸಂಘದ 70ನೇ ವಾರ್ಷಿಕ ಮಹಾಸಭೆ ಯಶಸ್ವಿ


ರಾಯಚೂರು, 21 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ನಿಯಮಿತದ ಸಂಘದ 70ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜಯವಂತರಾವ್ ಪತಂಗೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ವೇಳೆ ಜಯವಂತರಾವ್ ಪತಂಗೆ ಅವರು ಮಾತನಾಡಿ, ಸಂಘದಲ್ಲಿ ರೈತರಿಗಾಗಿ ರಸಗೊಬ್ಬರ, ಬೆಂಬಲ ಬೆಲೆಯಲ್ಲಿ ಜೋಳ, ತೊಗರಿ ಖರೀದಿ ಹಾಗೂ ಕೃಷಿ ಹುಟ್ಟುವಳಿಗಳ ದಾಸ್ತನು ಸಂಗ್ರಾಹಣೆಗಾಗಿ ಗೋದಾಮು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಉತ್ತಮವಾಗಿ ಮಾರಾಟ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ತಾಲೂಕು ಪತ್ತಿನ ಸಹಕಾರ ಸಂಘಗಳು ಮಾಡದ ಸಾಧನೆಯನ್ನು ರಾಯಚೂರಿನ ಸಂಘವು ಮಾಡಿದೆ ಎಂದು ಅವರು ತಿಳಿಸಿದರು.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕನ್ನು ನಿರ್ಮಾಣ ಮಾಡಿ ಅನೇಕ ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ರೈತರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.

ಈ ವೇಳೆ, ಕೃಷಿ ಉತ್ಪನ್ನಗಳ ವ್ಯಾಪಾರ ಚಟುವಟಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಜಯಪ್ರಕಾಶ್ ರೆಡ್ಡಿ ಹೆಗ್ಗಸನಹಳ್ಳಿ, ದ್ವಿತೀಯ ಸ್ಥಾನ ಪಡೆದ ಮಲ್ಲಿಕಾರ್ಜುನ ಗೌಡ ಮಂಚಲಾಪೂರ, ತೃತೀಯ ಸ್ಥಾನ ಪಡೆದ ಶ್ರೀಮತಿ ಶಿವಲಿಂಗಮ್ಮ ಸಾ.ವತ್ತೂರು ಹಾಗೂ ಸಕಾಲಕ್ಕೆ ಸಂಘಕ್ಕೆ ರಸಗೊಬ್ಬರ ಪೂರೈಕೆಗೆ ಸಹಕರಿಸಿದ ಸಚೀನ್ ಇಷ್ಟೋ, ಶಶಿಕುಮಾರ್ ಕ್ರಿಫ್ಟ್, ಸುನೀಲ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಶಿಧರ ಪಾಟೀಲ್, ನಿರ್ದೇಶಕರಾದ ಮಲ್ಲನಗೌಡ ಪಾಟೀಲ್, ಕೆ.ಶರಣಪ್ಪ ಕಲ್ಕಲಾ, ಶರಬಣ್ಣ ಗೌಡ ಶ್ರೀನಿವಾಸಪೂರ, ಮಲ್ಲಪ್ಪ ಗೌಡ, ಶಂಕರ ರಡ್ಡಿ, ಉಮೇಶ ಗೌಡ, ಎನ್.ಭೀಮರೆಡ್ಡಿ, ಲೆಕ್ಕಪರಿಶೋಧಕರಾಧ ವೆಂಕಟ ಕೃಷ್ಣನ್ ಇದ್ದರು.

ವಾರ್ಷಿಕ ಮಹಾ ಸಭೆಯ ಗೊತ್ತುವಳಿಗಳನ್ನು ಲೇಕಪಾಲರಾದ ನರಸಿಂಹಪ್ಪ ಮಂಡಿಸಿದರು. ನಿಯೋಜಿತ ಚಟುವಟಿಕೆಗಳ ಮಂಡನೆಯನ್ನು ನರಸಿಂಹಪ್ಪ ಮಾಡಿದರು. ಪ್ರಧಾನ ವ್ಯವಸ್ಥಾಪಕರಾದ ಬಂದಯ್ಯ ಅವರು ನಿರೂಪಿಸಿದರು. ಶೇಖಹುಸೇಸ್ ಅವರು ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande