ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿಜೀ ಪೀಠದಿಂದ ಉಚ್ಛಾಟನೆ
ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ಇಂದು ಕೂಡಲಸಂಗಮದಲ್ಲಿ‌ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್​ನಿಂದ ಕಾರ್ಯಕಾರಿಣಿ ಸಭೆ ನಡೆದಿದ್ದು, ಈ ವೇಳೆ ಜಗದ್ಗುರು ಬಸವಜಯ ಮ
ಪೀಠ


ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್: ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

ಇಂದು ಕೂಡಲಸಂಗಮದಲ್ಲಿ‌ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್​ನಿಂದ ಕಾರ್ಯಕಾರಿಣಿ ಸಭೆ ನಡೆದಿದ್ದು, ಈ ವೇಳೆ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನ ಪೀಠದಿಂದ ಉಚ್ಛಾಟನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಟ್ರಸ್ಟ್ ಅಧ್ಯಕ್ಷ, ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಈ ತೀರ್ಮಾನ ಮಾಡಲಾಗಿದೆ. ಸಭೆಯಲ್ಲಿ ಹಿರಿಯ ಮುಖಂಡ ಎಂ.ಪಿ. ನಾಡಗೌಡ, ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿ ಟ್ರಸ್ಟ್​ನ ಸದಸ್ಯರು ಭಾಗಿಯಾಗಿದ್ದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠಪ್ಪ ಅಸೂಟಿ ಪ್ರತಿಕ್ರಿಯಿಸಿ, ಸ್ವಾಮೀಜಿ ವಿರುದ್ಧ ಸ್ವಂತ ಆಸ್ತಿ ಗಳಿಕೆ ಆರೋಪವಿದೆ. ಸ್ಬಾಮೀಜಿಯವರಿಗೆ ಇರಬೇಕಾದ ಮೌಲ್ಯಗಳಿಲ್ಲದಿರುವುದು, ಸರಿಯಾಗಿ ಮಠದಲ್ಲಿ ಇರದಿರುವುದು. ದಾವಣೆಗೆರೆ, ಬಾಗಲಕೋಟೆ ಸೇರಿ ವಿವಿಧೆಡೆ ಅಸ್ತಿ ಮಾಡಿರುವ ಹಿನ್ನೆಲೆ ಹಾಗೂ ಹಲವು ವಿಚಾರಗಳನ್ನ ಗಣನೆಗೆ ತೆಗೆದುಕೊಂಡು‌ ಈ ಬಗ್ಗೆ ಮೂವತ್ತು ಜನ ಸದಸ್ಯರು ಇರುವ ಟ್ರಸ್ಟ್​ನಿಂದ ನಿರ್ಣಯ ಮಾಡಲಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನ ಉಚ್ಛಾಟಿಸಲಾಗಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande