ಬಳ್ಳಾರಿ : ಶರನ್ನವರಾತ್ರಿ ವೈಭವ: ಮುತ್ತೈದೆಯರಿಗೆ ಉಡಿ ತುಂಬುವಿಕೆ
ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬಳ್ಳಾರಿ ನಗರದ ದುರ್ಗಾ ಕಾಲೋನಿಯ ಪಟೇಲ್ ನಗರದ ಶ್ರೀಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಸೋಮವಾರದಿಂದ ಗುರುವಾರದವರೆಗೆ 10ನೇ ವರ್ಷದ ದಸರಾ `ಶರನ್ನವರಾತ್ರಿ ವೈಭವ'' ನಡೆಯಲಿದೆ ಎಂದು ಶ್ರೀ ದುರ್ಗಾದೇವಿ ಟ್ರಸ್ಟ್‍ನ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ಅವರ
ಬಳ್ಳಾರಿ : ದಸರಾ `ಶರನ್ನವರಾತ್ರಿ ವೈಭವ' : ಮುತ್ತೈದೆಯರಿಗೆ ಉಡಿ ತುಂಬುವಿಕೆ


ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬಳ್ಳಾರಿ ನಗರದ ದುರ್ಗಾ ಕಾಲೋನಿಯ ಪಟೇಲ್ ನಗರದ ಶ್ರೀಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಸೋಮವಾರದಿಂದ ಗುರುವಾರದವರೆಗೆ 10ನೇ ವರ್ಷದ ದಸರಾ `ಶರನ್ನವರಾತ್ರಿ ವೈಭವ' ನಡೆಯಲಿದೆ ಎಂದು ಶ್ರೀ ದುರ್ಗಾದೇವಿ ಟ್ರಸ್ಟ್‍ನ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಪತ್ರಕರ್ತರಿಗೆ ಈ ಮಾಹಿತಿ ನೀಡಿ, ದಸರಾ ವೈಭವದಲ್ಲಿ ವಿಶೇಷವಾಗಿ 1008 ಮುತ್ತೈದೆಯರಿಗೆ ಉಡಿ ತುಂಬಲಾಗುತ್ತದೆ. ಶ್ರೀ ವೀರಾಂಜನೇಯ ದೇವಸ್ಥಾನದ ಬಾಲಕಿಯರ ಕೋಲಾಟ ಮಂಡಳಿಯಿಂದ ಕೋಲಾಟ ಪ್ರದರ್ಶನವಾಗಲಿದೆ. ನಿತ್ಯವೂ ಪುರಾಣ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನವರಾತ್ರಿಯ ಅಂಗವಾಗಿ ಪ್ರತಿ ನಿತ್ಯವೂ ದೇವಿಯನ್ನು ವಿಭಿನ್ನವಾಗಿ ಅಲಂಕಾರ ಮಾಡಲಾಗುತ್ತದೆ. ಪ್ರತಿ ಅಲಂಕಾರವನ್ನು ಭಕ್ತಾಧಿಗಳು ದರ್ಶನ ಪಡೆದು ದೇವಿಯ ಕೃಪೆಗೆ ಒಳಗಾಗಬೇಕು. ದೇವಸ್ಥಾನದಲ್ಲಿ ನಿತ್ಯವೂ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಅವರು ತಿಳಿಸಿದರು.

ಶ್ರೀದುರ್ಗಾದೇವಿ ಟ್ರಸ್ಟ್‍ನ ಗೌರವ ಅಧ್ಯಕ್ಷರಾದ ಸಿ.ಎಸ್. ಸತ್ಯನಾರಾಯಣ ಮತ್ತು ಟ್ರಸ್ಟ್‍ನ ಸಂತೋಷ್ ಸ್ವಾಮಿ, ಜಿ.ಎಸ್. ವೆಂಕಟೇಶ್ ಹನುಮಂತಪ್ಪ, ರಾಧಮ್ಮ, ಯರ್ರಿಸ್ವಾಮಿ, ಸುನಿಲ್, ಕೃಷ್ಣ, ರಮೇಶ್, ವಿಜಯ್ ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande