ಸೆ.23, 24ರಂದು ರಾಯಚೂರ ಕೃಷಿ ವಿವಿಯಲ್ಲಿ ರಾಷ್ಟೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ
ರಾಯಚೂರು, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ನಿರ್ದೇಶನಾಲಯವು 2025ರ ಸೆಪ್ಟೆಂಬರ್ 23 ಮತ್ತು 24ರಂದು ರಾಷ್ಟೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನವನ್ನು ವಿವಿಯ ಪ್ರೇಕ್ಷಾಗೃಹದಲ್ಲಿ ಏರ್ಪಡಿಸಲಾಗಿದೆ ಎಂದು ವಿವಿಯ ಸ್ನಾತಕೋತ್ತರ ಡೀನ್
ಸೆ.23, 24ರಂದು ರಾಯಚೂರ ಕೃಷಿ ವಿವಿಯಲ್ಲಿ ರಾಷ್ಟೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ


ರಾಯಚೂರು, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ನಿರ್ದೇಶನಾಲಯವು 2025ರ ಸೆಪ್ಟೆಂಬರ್ 23 ಮತ್ತು 24ರಂದು ರಾಷ್ಟೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನವನ್ನು ವಿವಿಯ ಪ್ರೇಕ್ಷಾಗೃಹದಲ್ಲಿ ಏರ್ಪಡಿಸಲಾಗಿದೆ ಎಂದು ವಿವಿಯ ಸ್ನಾತಕೋತ್ತರ ಡೀನ್ ಹಾಗೂ ಸಮ್ಮೇಳನ ಸಂಘಟನಾ ಕಾರ್ಯದರ್ಶಿಗಳಾದ ಡಾ.ಗುರುರಾಜ ಸುಂಕದ ಅವರು ತಿಳಿಸಿದ್ದಾರೆ.

ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯುವ ಅಂತಿಮ ಘಟ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಸಮ್ಮೇಳನವು ಒಂದು ಉತ್ತಮ ವೇದಿಕೆಯಾಗಿದ್ದು, ಸಂಶೋಧನಾ ಜ್ಞಾನ, ಸಂವಹನ ಮತ್ತು ಪ್ರಸ್ತುತಿಯ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಜೊತೆಗೆ ಆಗಮಿಸುವ ಶಿಕ್ಷಣ ತಜ್ಞರು, ಶಿಕ್ಷಕರು, ವಿಜ್ಞಾನಿಗಳು, ಹಿರಿ-ಕಿರಿ ವಿದ್ಯಾರ್ಥಿಗಳೊಂದಿಗೆ ತಮ್ಮಲ್ಲಿರುವ ಸಂಶೋಧನಾ ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳಲು ಈ ವೇದಿಕೆಯು ಸಹಾಯಕವಾಗಲಿದೆ.

ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನದ ಉದ್ಘಾಟನೆಯನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಜಿ.ಪಾಟೀಲ್ ಅವರು ನೆರವೇರಿಸುವರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರುಗಳಾದ ಶರಣಗೌಡ ಬಯ್ಯಾಪುರ, ಬಸವನಗೌಡ ಬ್ಯಾಗವಟ, ಮಲ್ಲಿಕಾರ್ಜುನ ಡಿ, ಮಲ್ಲೇಶ ಕೋಲಿಮಿ, ಮದಸೂದನ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚಾವಡಿ, ಡಾ.ಶ್ರೀನಿವಾಸ ರಾವ್ ಮತ್ತು ಡಾ.ಕೆ.ನಾರಾಯಣ ರಾವ್ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು.

ಘನ ಉಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಸಂಶೋಧನೆ ಹಾಗೂ ವಿಸ್ತರಣಾ ನಿರ್ದೇಶಕರಾದ ಡಾ.ಎ.ಅಮರೇಗೌಡ, ಕುಲಸಚಿವರಾದ ಡಾ. ಶರಣಬಸಪ್ಪ ಕೋಟೆಪ್ಪಗೋಳ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ದಿ.ಡಾ.ಎಸ್.ಎ. ಪಾಟೀಲ ಅವರ ಧರ್ಮಪತ್ನಿಯವರಾದ ಶ್ರೀಮತಿ ಅನ್ನಪೂರ್ಣ ಎಸ್. ಪಾಟೀಲ ಅವರು ಇರುವರು.

ಎರಡು ದಿನಗಳ ಅವಧಿಯ ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟದ ವಿದ್ಯಾರ್ಥಿಗಳಿಂದ 35 ಸಂಶೋಧನಾತ್ಮಕ ವಿಷಯಗಳ ಮೇಲೆ ಪ್ರೌಢ ಪ್ರಬಂಧಗಳ ಸಾರಾಂಶಗಳು ಮಂಡನೆಯಾಗಲಿವೆ.

147 ಸಾರಾಂಶ ಸಹಿತ ಭಿತ್ತಿ ರೂಪಕಗಳಾಗಿ ಪ್ರಸ್ತುತಿಯಾಗಲಿವೆ. ಶಿಕ್ಷಕರು, ವಿಷಯ ತಜ್ಞರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ವೃತ್ತಿಪರರು ಭಾಗವಹಿಸುವ ನಿರೀಕ್ಷೆಯಿದೆ. ಖ್ಯಾತ ಕೃಷಿ ವಿಜ್ಞಾನಿ ದಿ. ಡಾ. ಎಸ್. ಎ. ಪಾಟೀಲ್ ರವರ ಸ್ಮರಣಾರ್ಥ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದು ವಿವಿಯ ಸ್ನಾತಕೋತ್ತರ ಡೀನ್ ಹಾಗೂ ಸಮ್ಮೇಳನ ಸಂಘಟನಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande