ಸಮಾಜದ ಋಣ ತೀರಿಸಿದರೆ ಬದುಕು ಸಾರ್ಥಕ : ಬಸವರಾಜ ಬೊಮ್ಮಾಯಿ
ಹಾವೇರಿ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಮಾಜದಿಂದ ಏನು ತೆಗೆದುಕೊಂಡಿರುತ್ತೇವೊ ಅದನ್ನು ಸಮಾಜಕ್ಕೆ ಕೊಟ್ಟು ಹೋಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು, ಹೋಗುವಾಗ ನಮ್ಮ ಬದುಕಿನ ಬ್ಯಾಲೆನ್ಸ್ ಸೀಟ್ ಬ್ಯಾಲೆನ್ಸ್ ಆಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾ
ಸಮಾಜದ ಋಣ ತೀರಿಸಿದರೆ ಬದುಕು ಸಾರ್ಥಕ : ಬಸವರಾಜ ಬೊಮ್ಮಾಯಿ


ಹಾವೇರಿ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಮಾಜದಿಂದ ಏನು ತೆಗೆದುಕೊಂಡಿರುತ್ತೇವೊ ಅದನ್ನು ಸಮಾಜಕ್ಕೆ ಕೊಟ್ಟು ಹೋಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು, ಹೋಗುವಾಗ ನಮ್ಮ ಬದುಕಿನ ಬ್ಯಾಲೆನ್ಸ್ ಸೀಟ್ ಬ್ಯಾಲೆನ್ಸ್ ಆಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪಾಯ ಪಟ್ಟರು.

ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಶಿಗ್ಗಾಂವ ಮಂಡಳದ ನಿಕಟಪೂರ್ವ ಅಧ್ಯಕ್ಷರಾದ ಶಿವಾನಂದ ಮ್ಯಾಗೇರಿ ಅವರ 53 ನೇಯ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಕೋರಿ ಮಾತನಾಡಿದರು.

ಬದುಕಿನ ಪ್ರಯಾಣದಲ್ಲಿ ಹಲವಾರು ಜನ ಬಂದು ಹೋಗುತ್ತಾರೆ. ಆದರೆ, ಕೆಲವೇ ಕೆಲವು ಜನ ಕೊನೆವರೆಗೂ ಮನದಾಳದಲ್ಲಿ ಇರುತ್ತಾರೆ. ರಕ್ತ ಸಂಬಂಧಿಗಳೇ ಇರಬೇಕೆಂದೇನಿಲ್ಲ. ಈ ಪ್ರಯಾಣದಲ್ಲಿ ನಮ್ಮ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಬರುವ ನಮ್ಮ ಮಿತ್ರರು ನಮ್ಮ ಸಹೋದರರಾಗಿ ನಿಲ್ಲುತ್ತಾರೆ. ಅಗಾಧವಾದ ಪ್ರೀತಿಯಿಂದ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande