ಕೊಪ್ಪಳ : `ನಿಕ್ಷಯ್ ಮಿತ್ರ'ರಾಗುವ ಮೂಲಕ ಕ್ಷಯರೋಗ ನಿರ್ಮೂಲ-ಡಾ.ಸುರೇಶ ಬಿ.ಇಟ್ನಾಳ್
ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಸ್ವ ಇಚ್ಚೆಯಿಂದ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು, ಕೊಪ್ಪಳರವರ ಸಹಯೋಗದೊಂದಿಗೆ ಚಿಕಿತ್ಸೆಯನ್ನು ಪಡೆಯುತ್ತಿರುವ ಕ್ಷಯರೋಗಿಗಳನ್ನು 6 ತಿಂಗಳ ಕಾಲ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ದತ್ತು ಪಡೆದು
ಕೊಪ್ಪಳ : `ನಿಕ್ಷಯ್ ಮಿತ್ರ'ರಾಗುವ ಮೂಲಕ ಕ್ಷಯರೋಗ  ನಿರ್ಮೂಲ : ಡಾ.ಸುರೇಶ ಬಿ.ಇಟ್ನಾಳ್


ಕೊಪ್ಪಳ : `ನಿಕ್ಷಯ್ ಮಿತ್ರ'ರಾಗುವ ಮೂಲಕ ಕ್ಷಯರೋಗ  ನಿರ್ಮೂಲ : ಡಾ.ಸುರೇಶ ಬಿ.ಇಟ್ನಾಳ್


ಕೊಪ್ಪಳ : `ನಿಕ್ಷಯ್ ಮಿತ್ರ'ರಾಗುವ ಮೂಲಕ ಕ್ಷಯರೋಗ  ನಿರ್ಮೂಲ : ಡಾ.ಸುರೇಶ ಬಿ.ಇಟ್ನಾಳ್


ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಸ್ವ ಇಚ್ಚೆಯಿಂದ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು, ಕೊಪ್ಪಳರವರ ಸಹಯೋಗದೊಂದಿಗೆ ಚಿಕಿತ್ಸೆಯನ್ನು ಪಡೆಯುತ್ತಿರುವ ಕ್ಷಯರೋಗಿಗಳನ್ನು 6 ತಿಂಗಳ ಕಾಲ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ದತ್ತು ಪಡೆದು ನಿಕ್ಷಯ್ ಮಿತ್ರರಾಗಿ ಕ್ಷಯರೋಗಿಗಳ ಮರಣ ಪ್ರಮಾಣ ಹಾಗೂ ಅನಾರೋಗ್ಯದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ಕೊಪ್ಪಳ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಿಕ್ಷಯ್ ಮಿತ್ರರಾಗಿ ತಮ್ಮ ಸಹಾಯ ಮತ್ತು ಸಹಕಾರವನ್ನು ಕೋರುತ್ತಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್ ಅವರು ಮನವಿ ಮಾಡಿದರು.

ಶನಿವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದಡಿಯಲ್ಲಿ ನಿಕ್ಷಯ್ ಮಿತ್ರ ಕಾರ್ಯಕ್ರಮ ಹಾಗೂ ಎನ್.ಟಿ.ಇ.ಪಿ. ಕಾರ್ಯಕ್ರಮದ ಮತ್ತೊಂದು ಮಹತ್ವಕಾಂಕ್ಷೆಯ ಯೋಜನೆಯಾದ ಸ್ವಸ್ಥ ನಾರಿ ಸಶಕ್ತ ಪರಿವಾರ ಆಂದೋಲನದ ಕುರಿತು ಅವರು ಮಾತನಾಡಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಶಶಿಧರ ಆಲೂರು ಅವರು ಮಾತನಾಡಿ, ಸ್ವಸ್ಥ ನಾರಿ ಸಶಕ್ತ ಪರಿವಾರ ಆಂದೋಲನವು ಜಿಲ್ಲೆಯಲ್ಲಿ ಸೆ.17 ರಿಂದ ಆರಂಭವಾಗಿದ್ದು ಅಕ್ಟೋಬರ್ 2 ರವರೆಗೆ ನಡೆಯಲಿದ್ದು, 15 ದಿನಗಳ ಈ ಅಭಿಯಾನದಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ರೋಗ ಪತ್ತೆ ಮಾಡುವ ಉದ್ದೇಶವಾಗಿರುತ್ತದೆ. ಮತ್ತು ಎನ್.ಟಿ.ಇ.ಪಿ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಕ್ಷಯ್ ಮಿತ್ರರನ್ನು ನೋಂದಾಯಿಸಲು ಕಾರ್ಯಚಟುವಟಿಕೆಗಳನ್ನು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳನ್ನು ಬಳಸಿಕೊಳ್ಳುವ ಮೂಲಕ ಹೊಸದಾಗಿ ನಿಕ್ಷಯ್ ಮಿತ್ರರನ್ನು ಗುರುತಿಸಿ ನೋಂದಾಯಿಸುವುದು, ಒಪ್ಪಿಗೆ ನೀಡಿದ ಎಲ್ಲಾ ಕ್ಷಯರೋಗಿಗಳಿಗೆ ಕನಿಷ್ಠ ಒಂದು ಆಹಾರ ಕಿಟ್‌ಗಳನ್ನು ಪಡೆಯಲು ನಿಕ್ಷಯ್ ಮಿತ್ರರೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಆಂದೋಲನವು ದುರ್ಬಲ ಗುಂಪಿನ ಮಹಿಳೆಯರಲ್ಲಿ ಅನಿಯಂತ್ರಿತ ಮಧುಮೇಹಿ, 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ದ, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ Immunosuppressants ಮತ್ತು Anti TNF therapy ಪಡೆಯುತ್ತಿರುವ ಮಹಿಳೆಯರು ಇರುತ್ತಾರೆ. ಇದರ ಜೊತೆಗೆ ಇತರೆ ಅಪಾಯದ ಗುಂಪುಗಳಲ್ಲಿ HIV ಹೊಂದಿದ ಮಹಿಳೆಯರು, ಹಳೆಯ ಮಹಿಳಾ ಕ್ಷಯರೋಗಿಗಳು, ಕ್ಷಯರೋಗಿಗಳ ಸಮೀಪ ಮಹಿಳಾ ಸಂಪರ್ಕಿತರು, ಮಹಿಳಾ ಧೂಮಪಾನಿಗಳು ಹಾಗೂ ಮದ್ಯವ್ಯಸನಿಗಳು, ಬಿ.ಎಂ.ಐ. 18.5 ಕ್ಕಿಂತ ದೇಹದ ತೂಕ ಕಡಿಮೆ ಇರುವವರು ಹಾಗೂ ಗಣಿಗಾರಿಕೆ ಮತ್ತು ಜಲ್ಲಿಕಟ್ಟುವ ಕೆಲಸದಲ್ಲಿರುವ ಮಹಿಳೆಯರು ಈ ದುರ್ಬಲ ಗುಂಪಿಗೆ ಸೇರಿದವರಾಗಿರುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ., ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande