ಪ್ರಪ್ರ ಘಟಕ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಗದಗ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ನಗರ ಜವಳಗಲ್ಲಿ ಬಳಿ ಸ್ಥಾಪಿಸಿರುವ ಪ್ರಪ್ರ ಘಟಕವನ್ನು ಸ್ವತಃ ವೀಕ್ಷಿಸಿದರು. ಪ್ರಭುವಿನೆಡೆಗೆ ಪ್ರಭುತ್ವದ ದೂರು ದಾಖಲಿಸಲು ನಿರ್ಮಿಸಲಾಗಿರುವ ಈ ಘಟಕದ ಕಾರ್ಯವಿಧಾನ ಕುರಿತು ಅವರು ವಿವರವಾದ ಮಾಹಿತಿ ಪಡೆದರು. ಪ್ರಪ್ರ
ಪೋಟೋ


ಗದಗ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ನಗರ ಜವಳಗಲ್ಲಿ ಬಳಿ ಸ್ಥಾಪಿಸಿರುವ ಪ್ರಪ್ರ ಘಟಕವನ್ನು ಸ್ವತಃ ವೀಕ್ಷಿಸಿದರು. ಪ್ರಭುವಿನೆಡೆಗೆ ಪ್ರಭುತ್ವದ ದೂರು ದಾಖಲಿಸಲು ನಿರ್ಮಿಸಲಾಗಿರುವ ಈ ಘಟಕದ ಕಾರ್ಯವಿಧಾನ ಕುರಿತು ಅವರು ವಿವರವಾದ ಮಾಹಿತಿ ಪಡೆದರು.

ಪ್ರಪ್ರ ಘಟಕದ ಗುಂಡಿ ಒತ್ತುವ ಮೂಲಕ ನಾಗರಿಕರು ನೇರವಾಗಿ ದೂರು ದಾಖಲಿಸಬಹುದು. ದಾಖಲಾಗುವ ದೂರು ತಕ್ಷಣವೇ ಜಿಲ್ಲಾ ಎಸ್‌ಪಿ ಕಚೇರಿಯ ಕಮಾಂಡ್ ಸೆಂಟರ್‌ಗೆ ತಲುಪುತ್ತದೆ. ಈ ಮೂಲಕ ಜನರಿಗೆ ತಕ್ಷಣ ನ್ಯಾಯ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಘಟಕದ ಕಾರ್ಯವಿಧಾನದ ಕುರಿತು ಸಚಿವ ಎಚ್‌.ಕೆ. ಪಾಟೀಲ ಸ್ವತಃ ಸಿಎಂಗೆ ವಿವರಿಸಿದರು.

ವೀಕ್ಷಣೆಯ ನಂತರ ಮುಖ್ಯಮಂತ್ರಿ ಜವಳಗಲ್ಲಿಯ ಇಂದಿರಾ ವನವನ್ನು ವೀಕ್ಷಣೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande