ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಕೊಪ್ಪಳ ಜಿಲ್ಲಾ ಚೆಸ್ ಅಮೆಚೂರ್ ಅಸೋಸಿಯೇಷನ್(ರಿ) ಇವರ ಸಂಯುಕ್ತಾಶ್ರಯದಲ್ಲಿ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಚೆಸ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.
ತರಬೇತಿ ಶಿಬಿರವು ಸೆಪ್ಟೆಂಬರ್ 22 ರಿಂದ ಜಿಲ್ಲಾ ಕ್ರೀಡಾಂಗಣ, ಕೊಪ್ಪಳದಲ್ಲಿ ಪ್ರಾರಂಭವಾಗಲಿದ್ದು, 5 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಿತಿಯವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ತರಬೇತಿ ಶಿಬಿರವು ಕೋರ್ಸ ಅವಧಿಗಳ ಪ್ರಕಾರ ಇರುತ್ತದೆ.
ಆಸಕ್ತ ಶಿಬಿರಾರ್ಥಿಗಳು ನಿಗದಿತ ಶುಲ್ಕವನ್ನು ಭರಿಸಿ ಭಾಗವಹಿಸಬಹುದು. ತರಬೇತಿ ಶಿಬಿರಕ್ಕೆ ನೋಂದಣಿಯಾಗುವ ಮೊದಲ 10 ಶಿಬಿರಾರ್ಥಿಗಳಿಗೆ ಶೇ.20 ರಷ್ಟು ರಿಯಾಯಿತಿ ಇರುತ್ತದೆ. ತರಬೇತಿಯು ಪ್ರತಿ ದಿನ ಸಂಜೆ 5.30 ರಿಂದ 6.30 ಗಂಟೆಯವರೆಗೆ ಜರುಗುತ್ತದೆ.
ಚೆಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಕ್ರೀಡಾಪಟುಗಳು ಮುಂಚಿತವಾಗಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 7975130354, 6360384374 ಅಥವಾ ಜಿಲ್ಲಾ ಕ್ರೀಡಾಂಗಣ, ಕೊಪ್ಪಳದಲ್ಲಿ ತರಬೇತಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್