ಗದಗ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಅಂಚೆ ಕಚೇರಿ ಸೇರಿದಂತೆ ಗದಗ-ಬೆಟಗೇರಿ, ಗದಗ ನಗರ, ನರಗುಂದ, ರೋಣ, ಹೊಳೆಆಲೂರ, ಗಜೇಂದ್ರಗಡ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ಬೆಳ್ಳಟ್ಟಿ ಅಂಚೆ ಕಚೇರಿಗಳಲ್ಲಿ ಆಧಾರ ಸೇವಾ ಕೇಂದ್ರ ಆರಂಭಿಸಲಾಗಿದೆ.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಆಧಾರ ಕಾರ್ಡ್ ತಿದ್ದುಪಡಿ ಸಲುವಾಗಿ ಆಧಾರ ಸೇವಾ ಕೇಂದ್ರ ವಿಶೇಷ ಕೌಂಟರ್ ಸಹ ಆರಂಭಿಸಲಾಗಿದೆ.
ಅಂಚೆ ಕಚೇರಿ ಸೇವಾ ಅವಧಿಯಲ್ಲಿ ಆಧಾರ ಸೇವಾ ಕೇಂದ್ರ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಜನರು ಈ ಸೇವಾ ಕೇಂದ್ರದಗಳ ಸದುಪಯೋಗ ಪದುಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣಣೆ ಮೂಲಕ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP