ವಿಶ್ವಕರ್ಮವು ಗುರುವಿನ ಸಂಸ್ಕೃತಿಯನ್ನು ಹೊಂದಿದೆ : ಸಿ.ಎಸ್.ಚಂದ್ರಭೂಪಾಲ್
ಶಿವಮೊಗ್ಗ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು. ಜ
Jayanti


ಶಿವಮೊಗ್ಗ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭರತಖಂಡವು ಧಾರ್ಮಿಕ ಹಾಗೂ ಜನ ಜೀವನ ಸಂಸ್ಕೃತಿಯಿ0ದ ನಡೆದು ಬಂದಿದೆ. ಇಲ್ಲಿ ಉತ್ತಮ ಗುರು ಪಡೆದರೆ ಮಾತ್ರ ಉತ್ತಮ ಸಂಸ್ಕೃತಿಯನ್ನು ಪಡೆಯಲು ಸಾಧ್ಯ. ಇಂತಹ ಗುರುವಿನ ಸಂಸ್ಕೃತಿಯನ್ನು ವಿಶ್ವಕರ್ಮ ಸಮಾಜ ಒಳಗೊಂಡಿದ್ದು, ಈ ಸಮಾಜದಲ್ಲಿ ಹುಟ್ಟಿದ ನೀವೆಲ್ಲಾ ಭಾಗ್ಯವಂತರು ಎಂದರು.

ಈ ಸಮಾಜದೊಟ್ಟಿಗೆ ನನಗೆ ಬಹಳ ವರ್ಷಗಳಿಂದ ಉತ್ತಮ ಒಡನಾಟವಿದೆ. ಇವರ ಆಚಾರ, ವಿಚಾರವನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದು, ಇವರು ಇದುವರೆಗೂ ಯಾವುದೇ ಅನ್ಯ ಸಮಾಜಕ್ಕೆ ಅನ್ಯಾಯ ಮಾಡದೆ ಸ್ವಾವಲಂಬನೆಯಿಂದ ಬದುಕನ್ನು ನಡೆಸುತ್ತಿದ್ದಾರೆ. ಹಾಗೂ ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

ವೃತ್ತಿಯ ಆಧಾರದಿಂದ ನಾವೆಲ್ಲಾ ಬೇರೆ ಬೇರೆ ಜಾತಿಯಲ್ಲಿ ಹುಟ್ಟಿದ್ದೇವೆ. ಆದರೆ ಇದನ್ನು ಮೀರಿ ನಾವು ಮನುಷ್ಯ ದೃಷ್ಟಿಯಿಂದ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಮನುಷ್ಯತ್ವದಿಂದ ಕಾಣಬೇಕು. ಯಾವುದೇ ಸಮಾಜವಾಗಲಿ ಅದರ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಕಾರ್ಯಸಿದ್ದಿ ಮಾಡಿಕೊಂಡು ಮಾನವೀಯ ಗುಣಗಳನ್ನು ವೃದ್ದಿಸಿಕೊಳ್ಳಬೇಕು ಎಂದರು.

ಬಸವಣ್ಣ 12 ನೇ ಶತಮಾನದಲ್ಲಿ ಶೋಷಣೆಗೆ ಒಳಗಾದ ಸಣ್ಣ ಸಣ್ಣ ಗುಂಪುಗಳನ್ನು ಒಟ್ಟುಗೂಡಿಸಿ ಅವರ ಅಭಿವೃದ್ದಿಗಾಗಿ ಶ್ರಮಿಸಿದರು. ಅದರಂತೆ ಇಂದಿನ ಸರ್ಕಾರವೂ ಇಂತಹ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಲೆ ತರಲು ಅನೇಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಿಂದ ಹೊರಗೆ ಉಳಿಯದೆ ನೀವೆಲ್ಲರೂ ಪಾಲ್ಗೊಳ್ಳಬೇಕು. ಇದು ನಿಮ್ಮೆಲ್ಲರ ಹಕ್ಕು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande