ಗದಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ಸೇವಾ ಪಾಕ್ಷಿಕ ಅಭಿಯಾನದಡಿ ರಕ್ತದಾನ ಶಿಬಿರವು ಗದಗ ನಗರ ಆಯ್.ಎಂ.ಎ ಹಾಲ್‍ನಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ಮಾತನಾಡಿ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು 14 ವರ್ಷಗಳ ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಕಳೆದ 11 ವರ್ಷಗಳಿಂದ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪ್ರಧಾನಿಯಾಗಿ ಇನ್ನಷ್ಟು ಕಾಲ ಏಕೆ ಮುಂದುವರಿಯಬೇಕು ಎನ್ನುವುದಕ್ಕೆ ಹಲವು ಕಾರಣಗಳು ಸಿಗುತ್ತವೆ ಮೋದಿಯವರು 25ಕ್ಕೂ ಹೆಚ್ಚು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಅದರಲ್ಲೂ ನಿರ್ಣಾಯಕ ಹುದ್ದೆಯಲ್ಲಿ ಇದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ, ಚಾರಿತ್ರ್ಯಕ್ಕೆ ಕಳಂಕ ಮೆತ್ತಿಲ್ಲ, ಭ್ರಷ್ಟಾಚಾರ ಸನಿಹ ಸುಳಿದಿಲ್ಲ, ವಿದೇಶ ಪ್ರವಾಸಕ್ಕೆ ಹೋಗಿ ದಿನವಿಡೀ ಶೃಂಗಸಭೆ, ವಿದೇಶಿ ಗಣ್ಯರ ಜತೆ ಮಾತುಕತೆ ನಡೆಸಿ, ರಾತ್ರಿ ಪ್ರಯಾಣಿಸಿ ಮರುದಿನ ಬೆಳಿಗ್ಗೆ ನಾಲ್ಕು ರಾಜ್ಯಗಳಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ತುಂಬಿದ ಸಭೆಯಲ್ಲಿ ಮಾತನಾಡುವ ಹುರುಪು ಮೋದಿ ಅವರದ್ದು. ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆಯ ವೇಳೆ ಅಪರಾತ್ರಿಯಲ್ಲೂ ಭದ್ರತಾ ಸಲಹೆಗಾರ, ರಕ್ಷಣಾ ಮಂತ್ರಿಯ ಜತೆ ಕುಳಿತು ಕ್ಷಣಕ್ಷಣದ ಮಾಹಿತಿಯನ್ನು ಪ್ರಧಾನಿ ಪಡೆಯುತ್ತಿದ್ದರು ಎಂದು ಕೇಳಿದಾಗ, ಅವರ ಉತ್ಸಾಹ ನೋಡಿದರೆ ಅವರಿಗೆ 75 ವರ್ಷ ಎಂದು ಎನಿಸುವದಿಲ್ಲಾ, ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶದ ಜನರ ಸೇವೆ ಮಾಡಬೇಕು ಹಾಗು ದೇಶವನ್ನು ಬಲಿಷ್ಠವಾಗಿ ಮುನ್ನೆಡೆಗೆ ತರಬೇಕು ಎನ್ನುವ ಅವರ ಉತ್ಸಾಹಕ್ಕೆ ನಮ್ಮದೊಂದು ಸಲಾಂ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಮಾತನಾಡಿ 2047 ರ ಹೊತ್ತಿಗೆ ವಿಕಸಿತ ಭಾರತವಾಗುವ ಗುರಿಯನ್ನು ನಾವು ಹೊಂದಿದ್ದೇವೆ. ಈಗಾಗಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ದಾಪುಗಾಲು ಇಟ್ಟಾಗಿದೆ.
ಅತಿದೊಡ್ಡ ಪ್ರಜಾಪ್ರಭುತ್ವ ದೇಶವಷ್ಟೆ ಅಲ್ಲದೇ ಅತಿದೊಡ್ಡ ಉತ್ಪಾದಕ ದೇಶವಾಗುವ, ಜಾಗತಿಕ ಪೂರೈಕೆ ಜಾಲದಲ್ಲಿ ನಿರ್ಣಾಯಕ ಕೊಂಡಿಯಾಗುವ, ರಕ್ಷಣಾ ವಲಯಲದಲ್ಲಿ ಸ್ವಾವಲಂಬನೆ ಸಾಧಿಸುವ, ಬಡತನದ ರೇಖೆಯಿಂದ ಪುಟಿಯುವ ಗುರಿ ಎದುರಾಗಿದೆ ಎಂದರು.
ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಎಸ್.ಕರೀಗೌಡ್ರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವರು. ಕುಟುಂಬ ತೊರೆದು ಸಂಘದ ಪ್ರಚಾರಕರಾಗಿ ಜೀವನ ಮುಡುಪಿಟ್ಟವರು. ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿ ಸಿದ್ಧಿಯನ್ನು ಹುಡುಕಿ ಹಿಮಾಲಯ ಏರಿದವರು, ಯೋಗ ಹಾಗು ಪ್ರಾಣಾಯಾಮವನ್ನು ಜೀವನದ ಭಾಗವಾಹಿಸಿಕೊಂಡವರು. ಸಹಜವಾಗಿಯೇ ಇವು ಅವರ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟದೆ ಎಂದರು.
ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿದ ಪ್ರಧಾನಿಗಳ ಹುಟ್ಟು ಹಬ್ಬದಂದು ಪಕ್ಷದ ಸೇವಾ ಪಾಕ್ಷಿಕ ಅಭಿಯಾನದಡಿ ನಮ್ಮ ಮಂಡಲಿದಲ್ಲಿ ಇಂದು ರಕ್ತದಾನ ಶಿಬಿರದಂತಾ ಸೇವಾ ಕಾರ್ಯ ಜರುಗಿರುವದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಬಿ.ಎಚ್.ಲದ್ವಾ, ಎಂ.ಎಂ.ಹಿರೇಮಠ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಚಂದ್ರು ತಡಸದ, ನಿರ್ಮಲಾ ಕೊಳ್ಳಿ, ಮಂಜುನಾಥ ಮುಳಗುಂದ, ಮುತ್ತು ಮುಶಿಗೇರಿ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಅಮರನಾಥ ಗಡಗಿ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ಮಂಜುನಾಥ ಶಾಂತಗೇರಿ, ರಾಚಯ್ಯ ಹೊಸಮಠ, ದೇವೆಂದ್ರಪ್ಪ ಹೂಗಾರ, ಗಂಗಾಧ ಮೇಲಗಿರಿ, ಲಕ್ಷ್ಮಣ ದೊಡ್ಮನಿ, ಜಯಶ್ರೀ ಉಗಲಾಟದ, ಶಾರದಾ ಸಜ್ಜನ, ವಂದನಾ ವರ್ಣೇಕರ್, ಕಮಲಾಕ್ಷೀ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಭಾವಿಕಟ್ಟಿ, ಕವಿತಾ ಬಂಗಾರಿ, ಪ್ರೀತಿ ಶಿವಪ್ಪನಮಠ, ಅಕ್ಕಮ್ಮ ವಸ್ತ್ರದ, ರಮೇಶ ಸಜ್ಜಗಾರ, ವಿಶ್ವನಾಥ ಹಳ್ಳಿಕೇರಿ, ರೇಖಾ ಗೌಳಿ, ಸತೀಶ ಗಿಡ್ಡಹನುಮಣ್ಣವರ, ಸುದರ್ಶನ ಹಾನಗಲ್, ಜಯಶ್ರೀ ಅಣ್ಣಿಗೇರಿ, ಅವಿನಾಶ ಹೊನಗುಡಿ, ರವಿ ಮಾನ್ವಿ, ಪೂರ್ಣಿಮಾ ಆಟದ, ವಾಸು ಹುಯಿಲಗೋಳ, ಸಂತೋಷ ಕಲ್ಯಾಣಿ, ಶೆಖವ್ವ ಮಾಸರೆಡ್ಡಿ, ಅನಸೂಯಾ ಶಿಲವಂತರ, ಸುಜಾತಾ ಕಾಡಪ್ಪನವರ, ಮಂಜುನಾಥ, ವಿನೋದ ಹಂಸನೂರ ಹಾಗೂ ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು. ಕಾರ್ಯಕ್ರಮವನ್ನು ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಶಂಕರ ಕಾಕಿ ನಿರೂಪಿಸಿದರು, ಸುರೇಶ ಚಿತ್ತರಗಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP