ಶಿವಮೊಗ್ಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2025-26ನೇ ಸಾಲಿನ 79ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ 5-16 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಬಾಲಭವನ ಸಮಿತಿಯಿಂದ ಸೆ.19 ರಂದು ಚಿತ್ರಕಲೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಿದೆ.
ಚಿತ್ರಕಲೆ ಸ್ಪರ್ಧೆಯಲ್ಲಿ 75 ಮಕ್ಕಳಿಗೆ 3 ಗುಂಪಿನ ವರ್ಗವಾರು ಮಾಡಿದ್ದು, 5-8 ವರ್ಷದ ಮಕ್ಕಳಿಗೆ ಶಾಲೆಯ ಪರಿಸರ”, 9-12 ವರ್ಷದ ಮಕ್ಕಳಿಗೆ “ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ” ಮತ್ತು 13-16 ವರ್ಷದ ಮಕ್ಕಳಿಗೆ “ಬಾಲ್ಯ ವಿವಾಹ ನಡೆಯುತ್ತಿರುವಾಗ ಅದನ್ನು ತಡೆಗಟ್ಟುವ ಚಿತ್ರಣ” ಎಂಬ ವಿಷಯಗಳಿದ್ದು, ಭಾಗವಹಿಸುವ ಮಕ್ಕಳಿಗೆ ಡ್ರಾಯಿಂಗ್ ಶೀಟ್‌ನ್ನು ಮಾತ್ರ ಕೊಡಲಾಗುತ್ತಿದ್ದು, ಇನ್ನುಳಿದ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು.
ದೇಶಭಕ್ತಿಗೀತೆ ಸ್ಪರ್ಧೆಯು ವೈಯಕ್ತಿಕ ಸ್ಪರ್ಧೆಯಾಗಿದ್ದು, 3 ರಿಂದ 4 ನಿಮಿಷಗಳು ಇರುತ್ತದೆ. ಕನ್ನಡ ಭಾಷೆಯಲ್ಲೇ ಹಾಡಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತ ಮಕ್ಕಳು ಸೆ. 19 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕರ್ನಾಟಕ ಸಂಘದ ಪಕ್ಕ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ಮಧ್ಯಾಹ್ನ 1.00 ಗಂಟೆ ಹಾಜರಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಮಂಜುಳ ಆರ್. -9353617934 ಇವರನ್ನು ಸಂಪರ್ಕಿಸುವುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa