ಗದಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಈ ಸೇವಾ ಸಂಘ/ಸಂಸ್ಥೆಗಳಿಗೆ ವಾರ್ಡ ನಂ 22 ರಲ್ಲಿರುವ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಇರುವ ನಗರಸಭೆಯ ಮಾಲೀಕತ್ವದ ಆಶ್ರಯ ನಿವೇಶನದಲ್ಲಿ ನಾಗರಿಕ ಸೌಲಭ್ಯ ಉದ್ದೇಶಕ್ಕಾಗಿ ಮೀಸಲಿರಿಸಿದ ಖಾಲಿ ನಿವೇಶನಗಳನ್ನು 30ವರ್ಷಗಳ ಅವಧಿಗೆ ಲೀಜ್ ನೀಡುವುದರ ಕುರಿತಾಗಿ ಈ ಕೆಳಗೆ ನಮೂದಿಸಿರುವ ಸಂಘ ಸಂಸ್ಥೆ ಇವುಗಳಿಗೆ ನಿವೇಶನಗಳನ್ನು ಕೋರಿ ಮನವಿ ಸಲ್ಲಿಸಿದ್ದರ ಮೇರೆಗೆ ದಿನಾಂಕ:27-05-2025 ರಂದು ಜರುಗಿದ ಆಶ್ರಯ ಸಮಿತಿ ಸಭೆಯಲ್ಲಿ ಮಾನ್ಯ ಅಧ್ಯಕ್ಷರು ಆಶ್ರಯ ಸಮಿತಿ ಗದಗ-ಬೆಟಗೇರಿ ನಗರಸಭೆ ಹಾಗೂ ಶಾಸಕರು ಗದಗ ವಿಧಾನಸಭಾ ಕ್ಷೇತ್ರ ರವರು ಸ್ವೀಕರಿಸಿದ ನಡಾವಳಿಯಂತೆ ಈ ಕೆಳಗಿನಂತೆ ಇರುವ ನಿವೇಶನಗಳನ್ನು ಲೀಜ್ ನೀಡಲು ನಿರ್ಣಯಿಸಿದ್ದು ಇರುತ್ತದೆ.
ಸಂಘ/ಸಂಸ್ಥೆ ಹೆಸರು ಗಂಗಿಮಡಿ ಆಶ್ರಯ ಕಾಲೋನಿ ಶ್ರೀ ಮಾರುತಿ ಸೇವಾ ಟ್ರಸ್ಟ್ ಕಮೀಟಿ (ರಿ)ರಿ.ಸ.ನಂ385,395,396,398 ನೇದ್ದರ ಪೈಕಿ ಗಂಗಿಮಡಿ ಆಶ್ರಯ ಕಾಲೋನಿ ಮಸ್ಜೀದ್-ಎ-ಮುಹಾಜರೀನ ಸೇವಾ ಕಮೀಟಿ ರಿ.ಸ.ನಂ385,395,396ನೇದ್ದನ್ನು ರಿ.ಸ.ನಂ/ಟಿ.ಪಿ.ಸಿ ನಂ/ಪ್ಲಾಟ್ ನಂ ಗಂಗಿಮಡಿ ಆಶ್ರಯ ಕಾಲೋನಿ ಈಶ್ವರ ಸೇವಾ ಸಮಿತಿ(ರಿ) ರಿ.ಸ.ನಂ385,395,396,398 ನೇದ್ದರ ಪೈಕಿ ಈ ಸೇವಾ ಸಂಘ/ಸಂಸ್ಥೆಗಳಿಗೆ ನಗರದ ವಿವಿಧ ವಾರ್ಡಗಳಲ್ಲಿ ನಗರಸಭೆಯ ಮಾಲೀಕತ್ವದ ನಾಗರಿಕ ಸೌಲಭ್ಯ ಉದ್ದೇಶಕ್ಕಾಗಿ ಮೀಸಲಿರಿಸಿದ ಖಾಲಿ ನಿವೇಶನಗಳನ್ನು 30 ವರ್ಷಗಳ ಅವಧಿಗೆ ಲೀಜ್ ನೀಡಲು ಯಾವುದಾದರೂ ತಂಟೆ ವ ತಕರಾರು ಇದ್ದಲ್ಲಿ ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ ಇವರ ಹೆಸರಿನಲ್ಲಿ ಈ ಕಾರ್ಯಾಲಯಕ್ಕೆ ಲಿಖಿತವಾಗಿ ಸೂಕ್ತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನದಿಂದ 07 ದಿನದೊಳಗಾಗಿ ಸಲ್ಲಿಸಲು ತಿಳಿಸಿದೆ.
ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಎಂದು ಪೌರಾಯುಕ್ತರು ನಗರಸಭೆ ಗದಗ ಬೆಟಗೇರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP