ಗದಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ತಾಂತ್ರಿಕ ಕೌಶಲ್ಯ ತರಬೇತಿಗಳಿಗೆ ಹೆಸರಾದ ಹುಬ್ಬಳ್ಳಿಯ ಜಿಟಿಟಿಸಿ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಬೆಂಗಳೂರಿನ ಬಾಷ್ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ 3 ತಿಂಗಳ ಕಾರ್ ಸರ್ವಿಸ್ ಟೆಕ್ನಿಶಿಯನ್ ತರಬೇತಿಯನ್ನು ಆಯೋಜಿಸಲಾಗಿದೆ.
ಹತ್ತನೇ ತರಗತಿ ಪಾಸ್, ಪಿಯುಸಿ/ಡಿಪ್ಲೋಮಾ ಯಾವುದೇ ಡಿಗ್ರೀ ಉತ್ತೀರ್ಣ ಅಥವಾ ಅನುತ್ತೀರ್ಣರಾದ 18 ರಿಂದ 28 ವಯೋಮಿತಿಯೊಳಗಿನ ಅಭ್ಯರ್ಥಿಗಳು ಈ ತರಬೇತಿ ಪ್ರವೇಶ ಪಡೆಯಲು ಅರ್ಹರಿರುತ್ತಾರೆ. ಅಭ್ಯರ್ಥಿಗಳಿಗೆ ವಾಹನ ವ್ಯವಸ್ಥೆ ಅಧ್ಯಯನ, ಕಾರ್ ವಾಹನದ ತಪಾಸಣೆ, ದುರಸ್ತಿ, ನಿರ್ವಹಣೆ, ಬಿಡಿ ಭಾಗಗಳ ಜೋಡಣೆ, ಉಪಕರಣಗಳ ಬಳಕೆ, ಸಂವಹನ, ವ್ಯಕ್ತಿತ್ವ ವಿಕಸನ, ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುವುದು. ಈ ತರಬೇತಿಗಳು ಕೈಗಾರಿಕೆಗಳ ಅವಶ್ಯಕತೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ಹೊಂದಿವೆ. ಮತ್ತು ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಆಟೊಮೊಬೈಲ್ ಉದ್ಯಮ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ.
ತರಬೇತಿಗಳು ಅಕ್ಟೋಬರ 01 ರಿಂದ ಪ್ರಾರಂಭವಾಗಲಿವೆ.ಜಿಟಿಟಿಸಿ ಹುಬ್ಬಳ್ಳಿ ಕೇಂದ್ರದಲ್ಲಿ ಉನ್ನತ ತಂತ್ರಜ್ಞಾನ ಮತ್ತು ತರಬೇತಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದ್ದು, ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಕ್ಯಾಂಪಸ್ ಸಂದರ್ಶನಗಳ ಮೂಲಕ ಉದ್ಯೋಗ ದೊರಕಿಸಿ ಕೊಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 30.09.2025 ರ ಒಳಗಾಗಿ ಖುದ್ದಾಗಿ ಜಿಟಿಟಿಸಿ ಹುಬ್ಬಳ್ಳಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶ ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ¸ ಜಿಟಿಟಿಸಿ, ಇಂಡಸ್ಟಿçಯಲ್ ಎಸ್ಟೇಟ್, ಗೋಕುಲ ರಸ್ತೆ, ಹುಬ್ಬಳ್ಳಿ. ದೂರವಾಣಿ: 0836-2333159/ 8183860552 . ಪ್ರಾಂಶುಪಾಲರು, ಜಿಟಿಟಿಸಿ, ಹುಬ್ಬಳ್ಳಿ ಮಾರುತಿ ಭಜಂತ್ರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಹಿಂದೂಸ್ತಾನ್ ಸಮಾಚಾರ್ / lalita MP