ಎಚ್.ಐ.ವಿ ಹಾಗೂ ಏಡ್ಸ್ ಜಾಗೃತಿಗಾಗಿ ಬೈಕ್ ರ‍್ಯಾಲಿ
ಗದಗ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಸಹಯೋಗದಲ್ಲಿ ತೀವ್ರಗೊಳಿಸಿದ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಓ ಡ್ಯಾಪ್ಕೋ ಅಧಿಕಾರಿ ಡಾ. ಅರುಂಧತಿ ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನ
ಪೋಟೋ


ಗದಗ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಸಹಯೋಗದಲ್ಲಿ ತೀವ್ರಗೊಳಿಸಿದ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಓ ಡ್ಯಾಪ್ಕೋ ಅಧಿಕಾರಿ ಡಾ. ಅರುಂಧತಿ ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

ಬೈಕ್ ರ‍್ಯಾಲಿಯು ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಟಿಪ್ಪು ಸರ್ಕಲ್ , ಮುಳಗುಂದ ನಾಕಾ, ಜುಮ್ಮಾ ಮಸೀದಿ, ಟಾಂಗಾ ಕೂಟ , ಮಹೇಂದ್ರ ಕರ ಸರ್ಕಲ್ , ಗಾಂಧಿ ಸರ್ಕಲ್ , ಪೋಸ್ಟ್ ಆಫೀಸ್ ಮುಂದೆ ಸಾಗಿ ನಗರದ ಕೆ.ಸಿ.ರಾಣಿ ರೋಡ್ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಡಾ.ಬಸವರಾಜ ಬಳ್ಳಾರಿ, ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ, ಆರೋಗ್ಯ ಇಲಾಖೆಯ ಎನ್ ಟಿ ಇಪಿ , ಡ್ಯಾಪ್ಕೋ, ಐಸಿಟಿಸಿ ,ಎಆರ್‌ಟಿ ಸಿಬ್ಬಂದಿ, ರಕ್ಷಣೆ ಸೃಷ್ಟಿ ಸಂಕುಲ, ನವಚೇತನ ಮತ್ತು ಚೈತನ್ಯ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande