ಕೋಲಾರ, ಸೆಪ್ಟೆಂಬರ್ ೧೭ (ಹಿ.ಸ) :
ಆ್ಯಂಕರ್ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ವಾರ್ಷಿಕ ಉತ್ತರೋತ್ತರ ಪ್ರಶಸ್ತಿಗೆ ಈ ಬಾರಿ ನಾಲ್ಕು ಸಾಧಕರು ಆಯ್ಕೆಯಾಗಿದ್ದಾರೆ. ಕನ್ನಡದ ಹಿರಿಯ ಕವಿ, ಗೀತ ರಚನಕಾರ ಚಿಂತಾಮಣಿಯ ನಿವೃತ್ತ ಉಪಾಧ್ಯಾಯ ಬಿ.ಆರ್ ಲಕ್ಷಣರಾವ್, ಅಂತಾರಾಷ್ಟಿಯ ಮಟ್ಟದಲ್ಲಿ ಹಿಂದುಸ್ತಾನೀ ಸಂಗೀತದ ಹಿರಿಮೆ-ಗರಿಮೆಗಳನ್ನು ಮೆರೆಸುತ್ತಿರುವ ಉಸ್ತಾದ್ ಫಯಾಜ್ ಖಾನ್, ಆದರ್ಶ ರೈತರಾದ ಶ್ರೀನಿವಾಸಪುರ ತಾಲ್ಲೂಕಿನ ಕೃಷ್ಣೇಗೌಡ ಹಾಗೂ ಮಂಜುಳಮ್ಮ ದಂಪತಿ ಹಾಗೂ ಕರ್ನಾಟಕ-ಆಂಧ್ರ ರಾಜ್ಯಗಳ ಗಡಿಭಾಗಗಳಲ್ಲಿ ಈವರೆಗೆ ೮ಸಾವಿರಕ್ಕೂ ಹೆಚ್ಚು ತೊಗಲು ಗೊಂಬೆ ಆಟದ ಪ್ರದರ್ಶನಗಳನ್ನು ನೀಡಿರುವ ಸುಮತಲಾ ರವರುಗಳಿಗೆ ಈ ವರ್ಷ ಉತ್ತರೋತ್ತರ ಪ್ರಶಸ್ತಿ ನೀಡಲು ಸೆಪ್ಟೆಂಬರ್ ೨೦ ರಂದು ಬೆಳಿಗ್ಗೆ ೧೧.೩೦ಕ್ಕೆ ಸ್ನಾತಕೋತ್ತರ ಕೇಂದ್ರ, ಮಂಗಸ0ದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ವಿತರಿಸಲಾಗುವುದೆಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ : ಬಿ.ಆರ್ ಲಕ್ಷಣರಾವ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್