ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾರತ, ತನ್ನ ಅಭಿನಂದನೆಗಳನ್ನು ತಿಳಿಸಿದೆ.
ಭಾರತೀಯ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಸುಶೀಲಾ ಕರ್ಕಿ ನೇತೃತ್ವದಲ್ಲಿ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದು ನೇಪಾಳದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನೆರವಾಗುತ್ತದೆ ಎಂದು ನಂಬುತ್ತೇವೆ” ಎಂದು ತಿಳಿಸಲಾಗಿದೆ.
ಭಾರತ ತನ್ನನ್ನು ನೇಪಾಳದ ಆಪ್ತ ನೆರೆಯ, ಪ್ರಜಾಸತ್ತಾತ್ಮಕ ಪಾಲುದಾರ ಹಾಗೂ ದೀರ್ಘಕಾಲದ ಅಭಿವೃದ್ಧಿ ಪಾಲುದಾರ ಎಂದು ಬಣ್ಣಿಸಿಕೊಳ್ಳುತ್ತಾ, ಎರಡು ದೇಶಗಳ ಹಂಚಿಕೆಯ ಸಮೃದ್ಧಿ ಮತ್ತು ಜನರ ಯೋಗಕ್ಷೇಮಕ್ಕಾಗಿ ನೇಪಾಳದೊಂದಿಗೆ ನಿರಂತರ ಸಹಕಾರ ನೀಡುವ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa