ಇಂದೋರ್, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಇಂದಿನಿಂದ ಎರಡು ದಿನಗಳ ಕಾಲ ಮಧ್ಯಪ್ರದೇಶ ಪ್ರವಾಸಕ್ಕಾಗಿ ಇಂದೋರ್‌ಗೆ ಆಗಮಿಸಲಿದ್ದಾರೆ. ಭಾನುವಾರ ಮಧ್ಯಾಹ್ನ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ಬರೆದ ‘ಪರಿಕ್ರಮ ಕೃಪಾ ಸಾರ್’ ಪುಸ್ತಕವನ್ನು ಅವರು ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ವಿಶೇಷ ಅತಿಥಿಯಾಗಿರಲಿದ್ದಾರೆ. ನರ್ಮದಾ ಪರಿಕ್ರಮ ಯಾತ್ರೆಯ ಅನುಭವ ಮತ್ತು ಭಾವನೆಗಳನ್ನು ಒಳಗೊಂಡಿರುವ ಈ ಕೃತಿ, ನದೀ ಸಂರಕ್ಷಣೆ ಹಾಗೂ ಜಲ ಜಾಗೃತಿಗೆ ಪ್ರೇರಣೆ ನೀಡುವುದೆಂದು ಲೇಖಕರು ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜನೆಯಲ್ಲಿ ನರ್ಮದಾ ಖಂಡ ಸೇವಾ ಸಂಸ್ಥಾನ ಪ್ರಮುಖ ಪಾತ್ರವಹಿಸಿದ್ದು, ಹಿಂದಿ ದಿವಸ್‌ನ ಸ್ಮರಣೀಯ ದಿನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ವಿಶೇಷವೆಂದು ಆಯೋಜಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa