ಮಿಜೋರಾಂಗೆ ಐತಿಹಾಸಿಕ ರೈಲು ಸಂಪರ್ಕ : ಪ್ರಧಾನಿ ಚಾಲನೆ
ಐಜ್ವಾಲ್, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಿಜೋರಾಂ ರಾಜ್ಯವನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುವ ಬೈರಾಬಿ–ಸೈರಾಂಗ್ ಹೊಸ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಸುಮಾರು 8,070 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗದ ಉದ್ಘಾ
Pm


ಐಜ್ವಾಲ್, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಿಜೋರಾಂ ರಾಜ್ಯವನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುವ ಬೈರಾಬಿ–ಸೈರಾಂಗ್ ಹೊಸ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಸುಮಾರು 8,070 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ಮಿಜೋರಾಂ ರಾಜಧಾನಿ ಐಜ್ವಾಲ್ ಈಗ ರೈಲು ನಕ್ಷೆಯಲ್ಲಿ ಸ್ಥಾನ ಪಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಇಂದಿನಿಂದ ಐಜ್ವಾಲ್ ರೈಲ್ವೆ ನಕ್ಷೆಯಲ್ಲಿ ಸೇರಲಿದೆ. ಇದು ಮಿಜೋರಾಂ ಜನರ ಕನಸನ್ನು ನನಸುಗೊಳಿಸುವ ಐತಿಹಾಸಿಕ ಕ್ಷಣ ಎಂದರು.

ಮಿಜೋರಾಂ ಜನರ ತ್ಯಾಗ, ಸೇವಾ ಮನೋಭಾವ ಹಾಗೂ ಧೈರ್ಯ ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಪ್ರಧಾನಿಯವರು ಸ್ಮರಿಸಿದರು.

9,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕೂಡ ಈ ಸಂದರ್ಭದಲ್ಲಿ ನಡೆಯಿತು.

ಕೆಟ್ಟ ಹವಾಮಾನದ ಕಾರಣದಿಂದ ಪ್ರಧಾನ ಮಂತ್ರಿ ಐಜ್ವಾಲ್ ನಗರ ತಲುಪಲು ಸಾಧ್ಯವಾಗದೇ, ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿಯೇ ರೈಲು ಮಾರ್ಗವನ್ನು ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande