ಚುರಚಂದ್‌ಪುರ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿಸುವುದು ಕೇಂದ್ರ ಸರ್ಕಾರದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚುರಚಂದ್‌ಪುರದಲ್ಲಿ ₹7,300 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಅಭಿವೃದ್ಧಿಗೆ ಶಾಂತಿಯೇ ಆಧಾರ. ಶಾಂತಿಯ ಮಾರ್ಗವನ್ನು ಅನುಸರಿಸುವ ಮೂಲಕ ಜನರು ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು. ಭಾರತ ಸರ್ಕಾರ ಪ್ರತಿಯೊಂದು ಹಂತದಲ್ಲೂ ಮಣಿಪುರದ ಜನರ ಜೊತೆ ನಿಂತಿದೆ” ಎಂದು ಭರವಸೆ ನೀಡಿದರು.
ಶಂಕುಸ್ಥಾಪನೆಗೊಂಡ ಯೋಜನೆಗಳಲ್ಲಿ ₹3,600 ಕೋಟಿ ಮೌಲ್ಯದ ನಗರ ರಸ್ತೆ–ಒಳಚರಂಡಿ ಸುಧಾರಣಾ ಯೋಜನೆ, ₹2,500 ಕೋಟಿ ಮೌಲ್ಯದ ಐದು ರಾಷ್ಟ್ರೀಯ ಹೆದ್ದಾರಿಗಳು, ಮಣಿಪುರ ಇನ್ಫೋಟೆಕ್ ಅಭಿವೃದ್ಧಿ ಯೋಜನೆ ಹಾಗೂ ಮಹಿಳೆಯರಿಗಾಗಿ ಒಂಬತ್ತು ಹಾಸ್ಟೆಲ್‌ಗಳ ನಿರ್ಮಾಣ ಸೇರಿವೆ.
ಪ್ರಧಾನಿ ಮೋದಿ ಅವರು ಮಣಿಪುರದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ, ವಸತಿ, ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಸಾಧನೆಗಳನ್ನು ವಿವರಿಸಿದರು. ಜಿರಿಬಮ್–ಇಂಫಾಲ್ ರೈಲು ಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ರಾಜ್ಯ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa