ಉತ್ತರಕಾಶಿ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರಾಲಿ ದುರಂತದ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿದ್ದ ತಂಡಗಳು ಗಂಗೋತ್ರಿ ಹೆದ್ದಾರಿಯಲ್ಲಿ ನೀರು ನುಗ್ಗಿದ ಪರಿಣಾಮ ಅರ್ಧ ದಾರಿಯಲ್ಲಿ ಸಿಲುಕಿವೆ. ದಬ್ರಾನಿ, ಪಾಪಡ್ ಗಡ್ ಮತ್ತು ಸೋನ್ ಗಡ್ ಬಳಿ ರಸ್ತೆ ಕೊಚ್ಚಿಹೋಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಬಿಆರ್ ಒ ರಸ್ತೆ ಪುನಃಸ್ಥಾಪನೆಗೆ ತಕ್ಷಣ ಕ್ರಮ ತೆಗೆದುಕೊಂಡಿದೆ, ಆದರೆ ಭಾರೀ ಮಳೆಯಿಂದಾಗಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ.
ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚಟುವಟಿಕೆ ನಡೆಸಲು ವಾಯುಪಡೆಯ ಸಹಾಯ ಕೋರಲಾಗಿದೆ, ಆದರೆ ಕೆಟ್ಟ ಹವಾಮಾನದಿಂದ ಅದು ಸಾಧ್ಯವಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa