ನವದೆಹಲಿ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಷ್ಯಾದಿಂದ ತೈಲ ಆಮದು ನಡೆಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದು, ಇದರ ಪ್ರಥಮ ಹಂತ ಇಂದಿನಿಂದ ಜಾರಿಗೆ ಬಂದಿದೆ. ಈ ನಡುವೆ, ಇನ್ನೊಂದು ಹಂತದ ಸುಂಕ ಆಗಸ್ಟ್ 27ರಿಂದ ಜಾರಿಗೆ ಬರಲಿದೆ.
ಶ್ವೇತಭವನದಿಂದ ಬುಧವಾರ ಬಿಡುಗಡೆಗೊಂಡ ಆದೇಶದಲ್ಲಿ, ರಷ್ಯಾ-ಭಾರತ ತೈಲ ವ್ಯವಹಾರವನ್ನು ಉಲ್ಲೇಖಿಸಿ, ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ನಿರ್ಧರಿಸಲಾಗಿದೆ.
ಭಾರತ ಈ ಕ್ರಮವನ್ನು ಅನ್ಯಾಯ ಮತ್ತು ಅಸಮಂಜಸವೆಂದು ಖಂಡಿಸಿ, ತನ್ನ ಹಿತಾಸಕ್ತಿಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.
ಈ ಕ್ರಮದಿಂದ ಜವಳಿ, ಸಮುದ್ರ ಉತ್ಪನ್ನಗಳು, ರತ್ನಾಭರಣಗಳು ಸೇರಿದಂತೆ ಹಲವು ವಲಯಗಳಿಗೆ ಆರ್ಥಿಕ ಹೊರೆ ಆಗಬಹುದೆಂಬ ಆತಂಕ ಇದೆ. ಇತ್ತ, ಅಮೆರಿಕದ ಸಮಾಲೋಚಕರ ತಂಡ ಆ.25ರಂದು ಭಾರತಕ್ಕೆ ಭೇಟಿ ನೀಡಲಿದ್ದು, ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಬಗ್ಗೆಯು ಸಮಾಲೋಚನೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa