ಡೆಹ್ರಾಡೂನ್, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮಗಳು ಗಂಭೀರ ಸ್ವರೂಪ ತಾಳಿದ್ದು, ಪರಿಹಾರ ಕಾರ್ಯಾಚರಣೆಗಳು ಜಾರಿಯಲ್ಲಿವೆ. ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಪ್ರಧಾನ ಮಂತ್ರಿ ಅವರು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಾಧ್ಯವಿರುವ ನೆರವು ಒದಗಿಸುವ ಭರವಸೆ ನೀಡಿದರೆ, ಮುಖ್ಯಮಂತ್ರಿ ಧಾಮಿ ಅವರು ರಾಜ್ಯ ಸರ್ಕಾರ ಸಂಪೂರ್ಣ ಶಕ್ತಿಯಿಂದ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವುದಾಗಿ ತಿಳಿಸಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಕೆಲವೊಂದು ಪ್ರದೇಶಗಳಲ್ಲಿ ತೊಂದರೆ ಉಂಟಾಗಿದ್ದರೂ ಎಲ್ಲ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಘಟನೆಯ ಪರಿಸ್ಥಿತಿ ಅವಲೋಕಿಸಲು ಧಾಮಿ ಅವರು ಸಹಸ್ರಧಾರ ಹೆಲಿಪ್ಯಾಡ್‌ನಿಂದ ಧರಾಲಿ ಬಜಾರ್, ಹರ್ಷಿಲ್ ಹಾಗೂ ಸುತ್ತಮುತ್ತಲಿನ ವಿಪತ್ತು ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ಹಾನಿ ಪರಿಶೀಲನೆಗೆ ಜೊತೆಗೆ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಮೇಘಸ್ಫೋಟದ ದುರಂತ : ಮಂಗಳವಾರ ಮಧ್ಯಾಹ್ನ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರೀ ಅನಾಹುತ ಉಂಟಾಗಿದ್ದು, ಖೀರ್‌ಗಂಗಾ ನದಿಯಲ್ಲೂ ಪ್ರವಾಹ ಉಂಟಾಗಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 4 ಜನರು ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa