ನಕ್ಸಲೈಟ್ ಕಮಾಂಡರ್ ಮಾರ್ಟಿನ್ ಕೆರ್ಕೆಟ್ಟಾ ಗುಂಡಿಗೆ ಬಲಿ
ರಾಂಚಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಕಾಮದಾರ ಪ್ರದೇಶದ ಪರ್ಹಿ ಕಾಡಿನಲ್ಲಿ ಮಂಗಳವಾರ ರಾತ್ರಿ ನಡೆದ ಪೋಲಿಸ ಗುಂಡಿನ ದಾಳಿಯಲ್ಲಿ ಕುಖ್ಯಾತ ಪಿಎಲ್‌ಎಫ್‌ಐ ಕಮಾಂಡರ್ ಮಾರ್ಟಿನ್ ಕೆರ್ಕೆಟ್ಟಾ ಬಲಿಯಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಕೆರ್ಕೆಟ್ಟಾ ಬಳಿಯಿಂದ ಶಸ್ತ್ರಾಸ್ತ್ರ
Encounter


ರಾಂಚಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಕಾಮದಾರ ಪ್ರದೇಶದ ಪರ್ಹಿ ಕಾಡಿನಲ್ಲಿ ಮಂಗಳವಾರ ರಾತ್ರಿ ನಡೆದ ಪೋಲಿಸ ಗುಂಡಿನ ದಾಳಿಯಲ್ಲಿ ಕುಖ್ಯಾತ ಪಿಎಲ್‌ಎಫ್‌ಐ ಕಮಾಂಡರ್ ಮಾರ್ಟಿನ್ ಕೆರ್ಕೆಟ್ಟಾ ಬಲಿಯಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಕೆರ್ಕೆಟ್ಟಾ ಬಳಿಯಿಂದ ಶಸ್ತ್ರಾಸ್ತ್ರಗಳು ವಶಪಡಿಸಲಾಗಿದೆ.

15 ಲಕ್ಷ ರೂ. ಬಹುಮಾನಿತ ಕೆರ್ಕೆಟ್ಟಾ, ಪಿಎಲ್‌ಎಫ್‌ಐನ ಕೇಂದ್ರ ಸಮಿತಿಯ ಸದಸ್ಯನಾಗಿದ್ದ. ಪೊಲೀಸ್ ಬಲಗಳು ಸ್ಥಳೀಯ ಕ್ಯೂಆರ್‌ಟಿ, ಠಾಣೆಗಳ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸಿದ್ದವು. ದಾಳಿ ವೇಳೆ ಕೆಲ ಉಗ್ರರು ಪರಾರಿಯಾಗಿದ್ದು, ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿಯುತ್ತಿದೆ.

ಕೆರ್ಕೆಟ್ಟಾ, ಪಿಎಲ್‌ಎಫ್‌ಐ ಮುಖ್ಯಸ್ಥ ದಿನೇಶ್ ಗೋಪ್‌ನ ಅತಿ ಸಮೀಪ ಸಹವರ್ತಿಯಾಗಿದ್ದ, ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದ. ಅವನ ವಿರುದ್ಧ ಎನ್‌ಐಎ ಪ್ರಕರಣವೂ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande